Tuesday, 29 December 2020

ಅರ್ಥಶಾಸ್ತ್ರ ಅಧ್ಯಾಯ - 1 ಅರ್ಥಶಾಸ್ತ್ರದ ಪರಿಚಯ ಈ ಅಧ್ಯಾಯದಲ್ಲಿ ಕೆಳಗಿನ ಅಂಶಗಳನ್ನು ತಿಳಿಯುತ್ತೇವೆ.

 ಅರ್ಥಶಾಸ್ತ್ರ

ಅಧ್ಯಾಯ - 1

ಅರ್ಥಶಾಸ್ತ್ರದ ಪರಿಚಯ

ಈ ಅಧ್ಯಾಯದಲ್ಲಿ ಕೆಳಗಿನ ಅಂಶಗಳನ್ನು ತಿಳಿಯುತ್ತೇವೆ.

• ಅರ್ಥಶಾಸ್ತ್ರದ ಅರ್ಥ ಮತ್ತು ಅರ್ಥಶಾಸ್ತ್ರದ ಮೂಲ ಪರಿಕಲ್ಪನೆಗಳು.

• ಅರ್ಥಶಾಸ್ತ್ರದ ಅಧ್ಯಯನ ಮಹತ್ವ.

• ಮೂಲ ಆರ್ಥಿಕ ಸಮಸ್ಯೆಗಳನ್ನು ವಿವರಿಸುವಲ್ಲಿ ಆರ್ಥಿಕ ಚಟುವಟಿಕೆಗಳು.

• ಸೂಕ್ಷ್ಮ ಅರ್ಥಶಾಸ್ತ್ರ ಮತ್ತು ವಿಶಾಲಾತ್ಮಕ ಅರ್ಥಶಾಸ್ತ್ರಗಳ ನಡುವಿನ ವ್ಯತ್ಯಾಸ.

ಅರ್ಥಶಾಸ್ತ್ರದ ಅರ್ಥ ಮತ್ತು ಮಹತ್ವ



ನಮ್ಮ ದೈನಂದಿನ ಜೀವನದಲ್ಲಿ ನಾವು ವಿವಿಧ ವಸ್ತುಗಳನ್ನು ಬಳಕೆ ಮಾಡುತ್ತೇವೆ. ಅವುಗಳನ್ನು

‘ಸರಕುಗಳು’ ಮತ್ತು ‘ಸೇವೆಗಳು’ ಎಂದು ಕರೆಯುತ್ತೇವೆ. ಸರಕುಗಳು ಭೌತಿಕ ಮತ್ತು ಗೋಚರಿಸುವ

ವಸ್ತುಗಳಾಗಿದ್ದು ಅವು ಆಹಾರ, ಬಟ್ಟೆ, ಪುಸ್ತಕ, ಸೈಕಲ್, ಫೆÇೀನ್, ಟಿವಿ, ಇತ್ಯಾದಿಗಳಾಗಿರುತ್ತವೆ. ಇನ್ನೊಂದೆಡೆ,

ಸೇವೆಗಳು ಅಗೋಚರಗಳಾಗಿದ್ದು ಅವುಗಳು ಕೂಡ ನಮಗೆ ಬಳಕೆಗೆ ಅಗತ್ಯವಿರುವವು. ವಿದ್ಯುಚ್ಛಕ್ತಿ, ಸಾರಿಗೆ,

ಶಿಕ್ಷಣ, ವೈದ್ಯಕೀಯ, ಹೊಲಿಗೆ, ಸಂಗೀತ, ಮೊಬೈಲ್ ಮತ್ತು ಅಂತರ್ಜಾಲ ಸೇವೆ ಇತ್ಯಾದಿಗಳು ನಾವು

ಬಳಕೆ ಮಾಡುವ ಸಾಮಾನ್ಯ ಸೇವೆಗಳಾಗಿವೆ. ಸರಕುಗಳನ್ನು ಮತ್ತು ಸೇವೆಗಳನ್ನು ಬಳಕೆ ಮಾಡುವವರನ್ನು

‘ಗ್ರಾಹಕರು’ ಹಾಗೂ ಸರಕುಗಳನ್ನು ಮತ್ತು ಸೇವೆಗಳನ್ನು ಉತ್ಪಾದಿಸುವವರನ್ನು ‘ಉತ್ಪಾದಕರು’ ಎನ್ನುತ್ತೇವೆ. ಈ

ಸರಕುಗಳನ್ನು ಮತ್ತು ಸೇವೆಗಳನ್ನು ನಾವು ಇರುವ ಸ್ಥಳದಲ್ಲಿ ಲಭ್ಯವಾಗುವಂತೆ ಮಾಡುವ ಸಾರಿಗೆದಾರರಿಗೆ,

ವ್ಯಾಪಾರಸ್ಥರಿಗೆ ಮತ್ತು ಅಂಗಡಿಕಾರರಿಗೆ ‘ವಿತರಕರು’ ಎನ್ನಲಾಗುತ್ತದೆ.

ಅಗತ್ಯವಾದ ಸರಕುಗಳನ್ನು ಮತ್ತು ಸೇವೆಗಳನ್ನು ನಾವು ನಿಗದಿಪಡಿಸಿದ ‘ಬೆಲೆ’ ನೀಡಿ ಕೊಂಡುಕೊಳ್ಳುತ್ತೇವೆ.

ಇದು ಹಣದ ರೂಪದಲ್ಲಿ ವ್ಯಕ್ತಪಡಿಸಿದ ಸರಕು ಅಥವಾ ಸೇವೆಗಳ ಮೌಲ್ಯವಾಗಿದೆ. ಅಂದರೆ ನಮ್ಮ ದೈನಂದಿನ

ಜೀವನದಲ್ಲಿ ಅಗತ್ಯವಿರುವ ವಿವಿಧ ಸರಕುಗಳನ್ನು ಮತ್ತು ಸೇವೆಗಳನ್ನು ಕೊಳ್ಳಲು ನಮಗೆ ಹಣ ಬೇಕು.

ಹಾಗಾದರೆ, ಹಣವನ್ನು ಹೇಗೆ ಪಡೆಯುವುದು? ಅದಕ್ಕಾಗಿ ನಾವೆಲ್ಲರೂ ಉದ್ಯೋಗದಲ್ಲಿ ತೊಡಗುತ್ತೇವೆ

ಅಥವಾ ಉದ್ಯೋಗಿಗಳಾಗುತ್ತೇವೆ. `ಉದ್ಯೋಗ'ದಿಂದ ನಾವು ‘ಆದಾಯ’ವನ್ನು ಪಡೆಯುತ್ತೇವೆ. ನಾವು ನಮ್ಮ

ಆದಾಯವನ್ನು ವೆಚ್ಚ ಮಾಡಿದಾಗ ಅದು ಉತ್ಪಾದಕರ ಮತ್ತು ವಿತರಕರ ಆದಾಯವಾಗಿರುತ್ತದೆ. ಶಾಂತಿ

ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವುದು ‘ಸರ್ಕಾರ’ದ ಜವಾಬ್ದಾರಿಯಾಗಿದ್ದು, ಅದು ಆಂತರಿಕ ಮತ್ತು

ಬಾಹ್ಯ ಭದ್ರತೆಯ ಜೊತೆಗೆ ಉತ್ತಮ ರಸ್ತೆಗಳು, ವಿದ್ಯುಚ್ಛಕ್ತಿಯಂತಹ ಮೂಲ ಸೌಲಭ್ಯಗಳನ್ನು ಒದಗಿಸುತ್ತದೆ.

ಸರಕಾರವು ತಾನು ಒದಗಿಸುವ ಸರಕುಗಳಿಗೆ ಮತ್ತು ಸೇವೆಗಳಿಗೆ ‘ತೆರಿಗೆ’ಗಳನ್ನು ವಿಧಿಸುತ್ತದೆ.

ಆದುದರಿಂದ, ಒಂದು ಸಾಮಾನ್ಯ ದಿನದಲ್ಲಿ ಪ್ರತಿಯೊಬ್ಬ ಉತ್ಪಾದಕರ, ವಿತರಕರ, ಗ್ರಾಹಕರ ಮತ್ತು

ಸರ್ಕಾರದ ನಡುವಿನ ಪರಸ್ಪರ ಸಂಬಂಧ ಕಂಡು ಬರುತ್ತದೆ. ಈ ಪ್ರತಿಯೊಬ್ಬರ ಆದಾಯ ಗಳಿಕೆ ಮತ್ತು ವೆಚ್ಚ

ಮಾಡುವ ಕಾರ್ಯವು ಆರ್ಥಿಕ ಚಟುವಟಿಕೆಯ ಮೂಲ ಅಂಶವಾಗಿದೆ. ಅರ್ಥಶಾಸ್ತ್ರವನ್ನು ವ್ಯಕ್ತಿಗಳ ಇಂತಹ

ಆರ್ಥಿಕ ಚಟುವಟಿಕೆಗಳ ಅಧ್ಯಯನವನ್ನು ಮಾಡುವ ವಿಷಯ ಅಥವಾ ಉತ್ಪಾದನೆ, ವಿತರಣೆ ಮತ್ತು ಸರಕು-

ಸೇವೆಗಳ ಬಳಕೆ ಕುರಿತು ಅಭ್ಯಸಿಸುವ ವಿಜ್ಞಾನವೆಂದು ವರ್ಣಿಸಬಹುದಾಗಿದೆ.


ಆದರೆ ಒಂದು ಮಹತ್ವದ ಸಂಗತಿಯೆಂದರೆ ನಾವು ಬಯಸುವ ಎಲ್ಲ ಸರಕು ಮತ್ತು ಸೇವೆಗಳನ್ನು

ಹೊಂದಲು ಸಾಧ್ಯವಿಲ್ಲ. ಏಕೆಂದರೆ, ಅವುಗಳನ್ನು ಕೊಳ್ಳಲು ಬೇಕಾದ ಹಣವು ಮಿತವಾಗಿದೆ ಅಥವಾ

‘ಕೊರತೆ’ಯಲ್ಲಿದೆ. ಹೀಗಿದ್ದಾಗ, ಅತ್ಯಗತ್ಯವಾದುದನ್ನು ಮೊದಲು ಆಯ್ಕೆ ಮಾಡಿ ಕಡಿಮೆ ಅಗತ್ಯವಾದುದರ

ಬಳಕೆಯನ್ನು ಮುಂದೂಡಲಾಗುತ್ತದೆ. ಆದುದರಿಂದ, ಆಹಾರವು ಚಲನಚಿತ್ರಕ್ಕಿಂತ ಹೆಚ್ಚು ಮಹತ್ವವಾದುದು;

ಟ್ರ್ಯಾಕ್ಟರನ್ನು ಕೊಳ್ಳುವುದಕ್ಕಿಂತ ಬೀಜಗಳನ್ನು ಮತ್ತು ರಸಗೊಬ್ಬರಗಳನ್ನು ಕೊಳ್ಳುವುದು ಹೆಚ್ಚು ಮಹತ್ವವಾದುದು;

ಇತ್ಯಾದಿ. ಈ ರೀತಿಯಾದ ಬಯಕೆಗಳನ್ನು ಹೆಚ್ಚು ಅಥವಾ ಕಡಿಮೆ ಮಹತ್ವದ್ದು ಎಂದು ವರ್ಗೀಕರಿಸುವುದನ್ನು

‘ಆದ್ಯತೆ’ ನೀಡುವುದು ಎನ್ನುತ್ತೇವೆ. ಆದ್ಯತೆ ನೀಡಿದ ಬಯಕೆಗಳನ್ನು ತೃಪ್ತಿ ಪಡಿಸಲು ಹೆಚ್ಚಿನ ಸಂಪನ್ಮೂಲ (ಹಣ)

ವನ್ನು ನಾವು ವಿನಿಯೋಗಿಸುತ್ತೇವೆ. ಆದುದರಿಂದ, ಸಂಪನ್ಮೂಲದ ಕೊರತೆಯಿದ್ದಾಗ ನಾವು ಹೆಚ್ಚು ಅಗತ್ಯವುಳ್ಳ

ಬಯಕೆಗಳನ್ನು ಆಯ್ಕೆ ಮಾಡುತ್ತೇವೆ ಅಥವಾ ಅವುಗಳ ಮಹತ್ವದ ಆಧಾರದ ಮೇಲೆ ಪಟ್ಟಿ ಮಾಡುತ್ತೇವೆ.

ಆದ್ದರಿಂದ ಕೊರತೆ ಮತ್ತು ಆಯ್ಕೆಗಳು ನಾವೆಲ್ಲರೂ ಎದುರಿಸುವ ಮೂಲಭೂತ ಸಮಸ್ಯೆಗಳಾಗಿದ್ದು ಅವು

ಅರ್ಥಶಾಸ್ತ್ರದ ಪ್ರಮುಖ ಸಮಸ್ಯೆಗಳೂ ಆಗಿವೆ.