Wednesday, 30 December 2020

ಕೇಂದ್ರ ಲೋಕಸೇವಾ ಆಯೋಗ ಕೇಂದ್ರ ಲೋಕಸೇವಾ ಆಯೋಗವು ಸಂವಿಧಾನದ ವಿಧಿ 315ರ ಅಡಿಯಲ್ಲಿ ಸ್ಥಾಪಿತವಾಗಿರುವ ಸಂವಿಧಾನಾತ್ಮಕ ಆಯೋಗವಾಗಿರುತ್ತದೆ

 ಕೇಂದ್ರ ಲೋಕಸೇವಾ ಆಯೋಗ



ಕೇಂದ್ರ ಲೋಕಸೇವಾ ಆಯೋಗವು ಸಂವಿಧಾನದ ವಿಧಿ 315ರ ಅಡಿಯಲ್ಲಿ ಸ್ಥಾಪಿತವಾಗಿರುವ

ಸಂವಿಧಾನಾತ್ಮಕ ಆಯೋಗವಾಗಿರುತ್ತದೆ. ಈ ಆಯೋಗದಲ್ಲಿ ಒಬ್ಬರು ಅಧ್ಯಕ್ಷರು ಮತ್ತು 10 ಜನ ಸದಸ್ಯರು

ಇರುತ್ತಾರೆ. ಇವರುಗಳನ್ನು ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ. ಸದಸ್ಯರುಗಳ ಅಧಿಕಾರಾವಧಿಯು

ನೇಮಕವಾದ ದಿನಾಂಕದಿಂದ ಆರು ವರ್ಷಗಳ ಅವಧಿಗೆ ಅಥವಾ ಅವರಿಗೆ 65 ವರ್ಷ ವಯಸ್ಸಿನವರೆಗೆ

ಅವಕಾಶವಿದ್ದು, ಇವುಗಳಲ್ಲಿ ಯಾವುದು ಮೊದಲು ಅದನ್ನು ಪರಿಗಣಿಸಿ ಸದಸ್ಯತ್ವದ ಅವಧಿಯನ್ನು

ಅಂತ್ಯಗೊಳಿಸಲಾಗುತ್ತದೆ. ರಾಷ್ಟ್ರಪತಿ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ದುರ್ನಡತೆಯ ಆಧಾರದ

ಮೇಲೆ ವಜಾ ಮಾಡುವ ಅಧಿಕಾರ ಹೊಂದಿರುತ್ತಾರೆ. ಆಯೋಗವು ಶಾಸಕಾಂಗ ಮತ್ತು ಕಾರ್ಯಾಂಗಗಳ

ಹಸ್ತಕ್ಷೇಪದಿಂದ ಸ್ವತಂತ್ರ್ಯವಾಗಿ ಕಾರ್ಯನಿರ್ವಹಿಸುತ್ತದೆ. ಆಯೋಗದಲ್ಲಿ ಕಾರ್ಯದರ್ಶಿಯವರು ಇರುತ್ತಾರೆ.

ಪ್ರಸ್ತುತ ದೆಹಲಿಯಲ್ಲಿ ಆಯೋಗದ ಕಛೇರಿ ಇದೆ.

ಕಾರ್ಯಗಳು

ಸಂವಿಧಾನದ 320ನೇ ವಿಧಿಯು ಕೆಳಕಂಡ ಕಾರ್ಯಗಳನ್ನು ನಿರ್ವಹಿಸಲು ಸೂಚಿಸಿದೆ.

1. ಕೇಂದ್ರದ ಎ ಮತ್ತು ಬಿ ವೃಂದದ ಸೇವೆಗಳಿಗೆ ನೇಮಕ ಮಾಡಲು ಪರೀಕ್ಷೆಗಳನ್ನು ನಡೆಸುವುದು.

2. ನೇರ ನೇಮಕಾತಿಗೆ ಸಂದರ್ಶನಗಳನ್ನು ನಡೆಸುವುದು.

3. ಸೇವಾ ಹುದ್ದೆಗಳಿಗೆ ಬಡ್ತಿ ಮತ್ತು ವರ್ಗಾವಣೆಗೆ ಅನುಸರಿಸಬೇಕಾದ ತತ್ವಗಳ ಬಗ್ಗೆ ಸರ್ಕಾರಕ್ಕೆ

ಸಲಹೆ ನೀಡುವುದು.

4. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಹುದ್ದೆಗಳಲ್ಲಿರುವ ಅಧಿಕಾರಿಗಳ ವರ್ತನೆಯ ಮೇರೆಗೆ

ಶಿಸ್ತುಕ್ರಮ ತೆಗೆದುಕೊಳ್ಳುವ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡುವುದು.

5. ರಾಷ್ಟ್ರಪತಿಗಳ ಸೂಚನೆ ಅನ್ವಯ ಯಾವುದೇ ವಿಷಯಗಳಿಗೆ ಸರ್ಕಾರಕ್ಕೆ ಸಲಹೆ ನೀಡುವುದು.

ಆಯೋಗವು ರಾಷ್ಟ್ರಮಟ್ಟದಲ್ಲಿ ಸಿವಿಲ್ ಸೇವೆ, ತಾಂತ್ರಿಕ ಸೇವೆ, ವೈದ್ಯಕೀಯ ಸೇವೆ, ಅರಣ್ಯ ಸೇವೆ ಮತ್ತು

ರಕ್ಷಣಾ ಸೇವೆಗಳಿಗೆ ಸಂಬಂಧಿಸಿದಂತೆ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುತ್ತದೆ. ಇವುಗಳಲ್ಲಿ

ಸಿವಿಲ್ ಸರ್ವಿಸ್‍ಗಾಗಿ ನಡೆಸುವ ಪರೀಕ್ಷೆಯು ಮಹತ್ವದ್ದಾಗಿರುತ್ತದೆ. ಐ.ಎ.ಎಸ್. (ಭಾರತೀಯ ಆಡಳಿತ

ಸೇವೆ), ಐ.ಪಿ.ಎಸ್. (ಭಾರತೀಯ ಪೆÇೀಲೀಸ್ ಸೇವೆ), ಐ.ಎಫ್.ಎಸ್. (ಭಾರತೀಯ ವಿದೇಶಿ ಸೇವೆ),

ಐ.ಆರ್.ಎಸ್. (ಭಾರತೀಯ ಕಂದಾಯ ಸೇವೆ), ಐ.ಎ.ಎ.ಎಸ್. (ಭಾರತೀಯ ಲೆಕ್ಕ ಮತ್ತು ಪರಿಶೋಧನಾ

ಸೇವೆ) ಪರೀಕ್ಷೆಗಳು ಮುಖ್ಯವಾಗಿರುತ್ತವೆ. ಸಾಮಾನ್ಯವಾಗಿ ಈ ಪರೀಕ್ಷೆಗಳನ್ನು ಮೂರು ಹಂತದಲ್ಲಿ ನಡೆಸುತ್ತದೆ.

1. ಪೂರ್ವಬಾವಿ ಪರೀಕ್ಷೆ

2. ಮುಖ್ಯ ಪರೀಕ್ಷೆ

3. ವ್ಯಕ್ತಿತ್ವ ಪರೀಕ್ಷೆ

ಕರ್ನಾಟಕ ರಾಜ್ಯ ಲೋಕಸೇವಾ ಆಯೋಗ

ಕೇಂದ್ರ ಹಂತದಲ್ಲಿ ಕೇಂದ್ರ ಲೋಕಸೇವಾ ಆಯೋಗವಿರುವಂತೆಯೇ ರಾಜ್ಯ ಹಂತದಲ್ಲಿ ರಾಜ್ಯ

ಲೋಕಸೇವಾ ಆಯೋಗ ಸಂವಿಧಾನದ ನಿರ್ದೇಶನದನ್ವಯ ಅಸ್ತಿತ್ವದಲ್ಲಿರುತ್ತದೆ. ಇದನ್ನು ಕರ್ನಾಟಕದಲ್ಲಿ

ಕರ್ನಾಟಕ ಲೋಕಸೇವಾ ಆಯೋಗವೆಂದು ಕರೆಯುತ್ತಾರೆ. ಇದು ದಿನಾಂಕ 18-5-1951ರಲ್ಲಿ ಸ್ಥಾಪಿಸಲ್ಪಟ್ಟಿತು.


ಆಯೋಗವು ಒಬ್ಬರು ಅಧ್ಯಕ್ಷರು ಮತ್ತು 9 ಜನ ಸದಸ್ಯರುಗಳನ್ನು ಒಳಗೊಂಡಿರುತ್ತದೆ. ಇವರುಗಳನ್ನು

ರಾಜ್ಯಪಾಲರು ನೇಮಿಸುತ್ತಾರೆ. ಇವರುಗಳ ಅಧಿಕಾರಾವಧಿಯು ನೇಮಕದಿಂದ ಆರು ವರ್ಷಗಳು ಅಥವಾ

ಅವರುಗಳ 62ನೇ ವಯಸ್ಸಿನವರೆಗೆ ಇದ್ದು ಇವುಗಳಲ್ಲಿ ಪ್ರಥಮವಾಗುವುದನ್ನು ಪರಿಗಣಿಸಲಾಗುತ್ತದೆ.

ಆಯೋಗವು ಬೆಂಗಳೂರಿನಲ್ಲಿ ಕೇಂದ್ರ ಕಛೇರಿಯನ್ನು ಹೊಂದಿರುತ್ತದೆ. ಮೈಸೂರು, ಬೆಳಗಾವಿ, ಕಲಬುರಗಿ

ಮತ್ತು ಶಿವಮೊಗ್ಗಗಳಲ್ಲಿ ಪ್ರಾಂತೀಯ ಕಛೇರಿಗಳನ್ನು ಹೊಂದಿರುತ್ತದೆ.

ಕಾರ್ಯಗಳು :

1. ರಾಜ್ಯ ಸರ್ಕಾರಿ ಸೇವೆಗೆ ಪತ್ರಾಂಕಿತ ಅಧಿಕಾರಿಗಳು ಮತ್ತು ಅಪತ್ರಾಂಕಿತ ಸಿಬ್ಬಂದಿಗಳನ್ನು, ಸ್ಪರ್ಧಾತ್ಮಕ

ಪರೀಕ್ಷೆಗಳು ಹಾಗೂ ಸಂದರ್ಶನಗಳ ಮೂಲಕ ಸರ್ಕಾರವು ಆಗಿಂದಾಗ್ಗೆ ಹೊರಡಿಸುವ ನೇಮಕಾತಿ

ನಿಯಮಗಳು ಹಾಗೂ ಸಂಬಂಧಿತ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳ

ಮೇರೆಗೆ ಆಯ್ಕೆ ಮಾಡುವುದು. ಉದಾ : ಉಪವಿಭಾಗಾಧಿಕಾರಿ, ಆರಕ್ಷಕ ಉಪ ಆಯುಕ್ತರು,

ತಹಶೀಲ್ದಾರರು, ಇತ್ಯಾದಿ ಹುದ್ದೆಗಳು.

2. ನೇರವಾಗಿ ನೇಮಕಗೊಳ್ಳುವ ಅಭ್ಯರ್ಥಿಗಳ ಸಂದರ್ಶನ ನಡೆಸುವುದು.

3. ಸರ್ಕಾರಿ ನೌಕರರಿಗೆ ವರ್ಷಕ್ಕೆ ಎರಡು ಬಾರಿ ಇಲಾಖಾ ಪರೀಕ್ಷೆಗಳನ್ನು ನಡೆಸುವುದು.

4. ಶಿಸ್ತು ಮತ್ತು ಪೂರ್ವಾನ್ವಯ ಬಡ್ತಿ ಪ್ರಕರಣಗಳ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡುವುದು.

5. ಕೇಂದ್ರ ಲೋಕಸೇವಾ ಆಯೋಗವು ರಾಜ್ಯದಲ್ಲಿ ನಡೆಸುವ ವಿವಿಧ ಪರೀಕ್ಷೆಗಳ ಸಮನ್ವಯ ಕಾರ್ಯ

ನಿರ್ವಹಿಸುವುದು