Sunday, 27 December 2020

ಎರಡನೆಯ ಚಂದ್ರಗುಪ್ತ (ಸಾ.ಶ.380-412) ಸಮುದ್ರಗುಪ್ತನ ಸಾಮ್ರಾಜ್ಯವನ್ನು ಎರಡನೇ ಚಂದ್ರಗುಪ್ತನು ಮತ್ತಷ್ಟು ವಿಸ್ತರಿಸಿ ಸ್ಥಿರತೆಯನ್ನು ತಂದನು.

 ಎರಡನೆಯ ಚಂದ್ರಗುಪ್ತ (ಸಾ.ಶ.380-412)
ಸಮುದ್ರಗುಪ್ತನ ಸಾಮ್ರಾಜ್ಯವನ್ನು ಎರಡನೇ

ಎರಡನೆಯ ಚಂದ್ರಗುಪ್ತ (ಸಾ.ಶ.380-412)  ಸಮುದ್ರಗುಪ್ತನ ಸಾಮ್ರಾಜ್ಯವನ್ನು ಎರಡನೇ  ಚಂದ್ರಗುಪ್ತನು ಮತ್ತಷ್ಟು ವಿಸ್ತರಿಸಿ ಸ್ಥಿರತೆಯನ್ನು ತಂದನು.

ಚಂದ್ರಗುಪ್ತನು ಮತ್ತಷ್ಟು ವಿಸ್ತರಿಸಿ ಸ್ಥಿರತೆಯನ್ನು ತಂದನು.

ಇವನು ಶಕರನ್ನು ಸೋಲಿಸಿ ಪಶ್ಚಿಮ ಭಾರತವನ್ನು

ಗುಪ್ತರ ಸಾಮ್ರಾಜ್ಯಕ್ಕೆ ಸೇರಿಸಿಕೊಂಡನು. ಭಾರತದ

ಅನೇಕ ರಾಜ ಮನೆತನಗಳೊಂದಿಗೆ ಈತನು ಮದುವೆ

ಮೂಲಕ ಸಂಬಂಧವನ್ನು ಬೆಳೆಸಿ ಪ್ರಭಾವಿಯಾಗಿ


ವಿಕ್ರಮಾದಿತ್ಯನೆಂಬ ಬಿರುದನ್ನು ಪಡೆದನು. ಇವನ

ಕಾಲದಲ್ಲಿ ಯುದ್ಧಗಳಿಗಿಂತ ಸಾಹಿತ್ಯ ಹಾಗೂ ಕಲೆಗೆ



ನೀಡಿದ  ಸ್ಮರಣೀಯವಾಗಿದೆ. ಸುಪ್ರಸಿದ್ಧ ಸಂಸ್ಕøತ ಕವಿ ಹಾಗೂ ನಾಟಕಕಾರ ಕಾಳಿದಾಸನು

ಇದೇ ಕಾಲಕ್ಕೆ ಸೇರಿದವನು. ಮೇಘದೂತ, ರಘುವಂಶ, ಕುಮಾರಸಂಭವ ಹಾಗೂ ಋತುಸಂಹಾರ ಅವನ

ಕಾವ್ಯಗಳು. ಅಭಿಜ್ಞಾನ ಶಾಕುಂತಲವು ಅವನ ಶ್ರೇಷ್ಠ ನಾಟಕಗಳಲ್ಲಿ ಒಂದು. ಶೂದ್ರಕನ ಮೃಚ್ಛಕಟಿಕ ಹಾಗೂ

ವಿಶಾಖದತ್ತನ ಮುದ್ರರಾಕ್ಷಸ ಈ ಕಾಲದ ಇತರ ಕೃತಿಗಳು.


ನಿಮಗಿದು ತಿಳಿದಿರಲಿ

ಮೇಘದೂತ : ಇದು ಕಾಳಿದಾಸನು ರಚಿಸಿದ ಕಾವ್ಯ. ಇದು ಅವನ ಸುಪ್ರಸಿದ್ಧ ಕೃತಿಗಳಲ್ಲಿ ಒಂದು. ಕುಬೇರ

ರಾಜನು ಯಕ್ಷನನ್ನು ಕರ್ತವ್ಯ ಲೋಪಕ್ಕಾಗಿ ಒಂದು ವರ್ಷ ಗಡಿಪಾರು ಮಾಡುತ್ತಾನೆ. ಈ ಸಂದರ್ಭದಲ್ಲಿ ಕೈಲಾಸ

ಪರ್ವತ ಪ್ರದೇಶದಲ್ಲಿ ಇರುವ ತನ್ನ ಪತ್ನಿಗೆ ಪ್ರೀತಿಯ ಸಂದೇಶವನ್ನು ತಲುಪಿಸಲು ಯಕ್ಷನು ಹಾದು ಹೋಗುತ್ತಿರುವ

ಮೋಡವೊಂದಕ್ಕೆ ಒಪ್ಪಿಸುತ್ತಾನೆ. ಚಲಿಸುವ ಮೋಡಕ್ಕೆ ಅವಳನ್ನು ತಲುಪುವ ದಾರಿಯಲ್ಲಿ ಕಂಡುಬರುವ

ರಮಣೀಯ ದೃಶ್ಯಗಳನ್ನು ಯಕ್ಷನು ವಿವರಿಸುವ ಕಥನವು ಮೇಘದೂತದಲ್ಲಿದೆ. ಇದು ಇಂದಿಗೂ ಜಗತ್ತಿನಾದ್ಯಂತ

ಹೆಸರುವಾಸಿಯಾದ ಕಾವ್ಯ. ಭಾರತದ ಎಲ್ಲ ಭಾಷೆಗಳಲ್ಲಿ ಹಾಗೂ ಜಗತ್ತಿನ ಪ್ರಮುಖ ಭಾಷೆಗಳಲ್ಲಿ ಇದರ ಅನುವಾದ

ಪ್ರಕಟಗೊಂಡಿದೆ. ಮೇಘದೂತದ ನಾಟಕವನ್ನು ಎಲ್ಲರೂ ನೋಡಿ ಇಂದಿಗೂ ಆನಂದಿಸುತ್ತಿದ್ದಾರೆ.

ಹೂಣರ ದಾಳಿಗೆ ನಿರಂತರವಾಗಿ ಒಳಗಾಗಿ ಗುಪ್ತರ ಸಾಮ್ರಾಜ್ಯವು ಪತನ ಕಂಡಿತು. ಗುಪ್ತರು

ಬೃಹತ್ ಸುಸಜ್ಜಿತ ಸೇನೆಯನ್ನೇನೂ ಹೊಂದಿರಲಿಲ್ಲ. ಸಾಮಂತರು ಸೈನ್ಯದ ಅವಶ್ಯಕತೆಯನ್ನು ಯುದ್ಧಗಳ

ಸಮಯದಲ್ಲಿ ನೀಗುತ್ತಿದ್ದರು. ಹೀಗಾಗಿಯೇ ಸಾಮಂತರು ಇವರ ಕಾಲದಲ್ಲಿ ಬಹಳಷ್ಟು ಅಧಿಕಾರವನ್ನು

ಚಲಾಯಿಸುತ್ತಿದ್ದರು. ಅಧಿಕಾರ ವರ್ಗವು ಕುಮಾರ ಅಮಾತ್ಯರಿಂದ ಕೂಡಿತ್ತು. ವಿವಿಧ ಹುದ್ದೆಗಳನ್ನು ಕುಮಾರ

ಅಮಾತ್ಯರು ಹೊಂದಿದ್ದರು. ಆಡಳಿತವು ವಿಕೇಂದ್ರೀಕೃತಗೊಂಡಿತ್ತು. ಪುರೋಹಿತರು ಅನೇಕ ದಾನ ದತ್ತಿಗಳನ್ನು

ಪಡೆಯುತ್ತಿದ್ದರು. ಭೂದಾನವಾಗಿ ಅನೇಕ ಹಳ್ಳಿಗಳನ್ನು ಒಳಗೊಂಡ ಹಾಗೆ ಇವರುಗಳಿಗೆ ನೀಡಲಾಗುತ್ತಿತ್ತು.

ಮೆಹರೂಲಿಯಲ್ಲಿರುವ ಕಬ್ಬಿಣದ ಸ್ತಂಭ


ಅನೇಕ ದೇವಾಲಯಗಳೂ ಇದರಿಂದ ಅಭಿವೃದ್ಧಿಯನ್ನು ಕಂಡವು. ಇಂತಹ ಪ್ರದೇಶಗಳು ಅನೇಕ ಆರ್ಥಿಕ

ಹಾಗೂ ಆಡಳಿತಾತ್ಮಕ ವಿನಾಯತಿಗಳನ್ನು ಪಡೆದುದಲ್ಲದೆ ಎಲ್ಲ ವ್ಯವಹಾರದಲ್ಲಿಯು ಸ್ವತಂತ್ರ ಪ್ರದೇಶಗಳಾದವು.

ಕ್ರಮೇಣವಾಗಿ ಆ ಪ್ರದೇಶದ ನಿವಾಸಿಗಳು, ಕೃಷಿಕರು, ಕುಶಲಕರ್ಮಿಗಳು, ಭೂಮಾಲೀಕರ ಕಟ್ಟುಪಾಡಿಗೆ

ಅಧೀನರಾದರು. ಹೀಗೆ ಸಮಾಜವು ಸಂಕೀರ್ಣ ಹಾದಿಯತ್ತ ಸಾಗಿತ್ತು