Thursday, 31 December 2020

ಚಿತ್ರದುರ್ಗದ ನಾಯಕರಿಗೆ ಕರ್ನಾಟಕದ ಇತಿಹಾಸದಲ್ಲಿ ಗಣ್ಯ ಸ್ಥಾನವಿದೆ

 ಚಿತ್ರದುರ್ಗದ ನಾಯಕರು


ಚಿತ್ರದುರ್ಗದ ನಾಯಕರಿಗೆ ಕರ್ನಾಟಕದ ಇತಿಹಾಸದಲ್ಲಿ ಗಣ್ಯ ಸ್ಥಾನವಿದೆ. ಇವರು 16

ರಿಂದ 18 ನೇ ಶತಮಾನಗಳವರೆಗೆ ಪಾಳೆಯಗಾರರಾಗಿ ಆಳ್ವಿಕೆ ನಡೆಸಿದರು.

13 ಜನ ನಾಯಕರು 211 ವರ್ಷಗಳ ಕಾಲ ಈ ಸಂಸ್ಥಾನವನ್ನು ಆಳಿದರು. ಮತ್ತಿ

ತಿಮ್ಮಣ್ಣನಾಯಕ (ಸಾ.ಶ. 1568-1589) ಈ ಸಂಸ್ಥಾನದ ಮೊದಲ ಅರಸ. ಒಂದನೇ ಕಸ್ತೂರಿ

ರಂಗಪ್ಪ ನಾಯಕ (ಸಾ.ಶ. 1603-1652), ಕಸ್ತೂರಿ ಚಿಕ್ಕಣ್ಣ ನಾಯಕ (ಸಾ.ಶ. 1675-1686),

ಬಿಚ್ಚುಗತ್ತಿ ಭರಮಣ್ಣ ನಾಯಕ (ಸಾ.ಶ. 1689-1721), ಹಿರೇಮದಕರಿ ನಾಯಕ (ಸಾ. ಶ. 1721-

1749) ಮೊದಲಾದವರು ಪ್ರಸಿದ್ಧ ರಾಜರಾಗಿದ್ದರು.ರಾಜಾವೀರ ಮದಕರಿ ನಾಯಕ (ಸಾ.ಶ. 1754-1779) :


ಈತನು ಚಿತ್ರದುರ್ಗದ ನಾಯಕರಲ್ಲಿ ಅತ್ಯಂತ ಪ್ರಬಲ ಹಾಗೂ ಪ್ರಸಿದ್ಧನಾದವನು.

ಕೇವಲ ಹನ್ನೆರಡು ವರ್ಷದವನಾಗಿದ್ದಾಗಲೇ ಸಿಂಹಾಸನವನ್ನೇರಿದನು. ಮದಕರಿಯು ಹೈದರಾಲಿಗೆ

ಹಲವಾರು ಯುದ್ಧಗಳಲ್ಲಿ ಸಹಾಯ ಮಾಡಿದನು. ಆದರೆ ಮದಕರಿಯ ಸಾಹಸವನ್ನು ಮನಗಂಡ

ಹೈದರಾಲಿ ಒಳಗೊಳಗೆ ಮತ್ಸರಪಟ್ಟನು. ಈತನನ್ನು ಹತ್ತಿಕ್ಕಲು ಚಿತ್ರದುರ್ಗದ ಏಳು ಸುತ್ತಿನ

ಕೋಟೆಗೆ ಮುತ್ತಿಗೆ ಹಾಕಿದನು. ಆದರೆ ಅಭೇದ್ಯವಾದ ಕೋಟೆಯನ್ನು ವಶಪಡಿಸಿಕೊಳ್ಳುವುದು

ಅಸಾಧ್ಯದ ಮಾತಾಗಿತ್ತು. ಆದುದರಿಂದ ಆತನ ಸೈನಿಕರು ಕೋಟೆಯ ರಹಸ್ಯದಾರಿಯನ್ನು

ಪತ್ತೆಮಾಡಿ, ಕಾವಲುಗಾರನಿಲ್ಲದ ವೇಳೆ ಕಳ್ಳಗಿಂಡಿಯಿಂದ ಕೋಟೆ ಪ್ರವೇಶಿಸಲು ಯತ್ನಿಸಿದರು.

ಆ ವೇಳೆಗೆ ಕಾವಲುಗಾರನ ಹೆಂಡತಿ ಓಬವ್ವ ತನ್ನ ಒನಕೆಯಿಂದ ಅನೇಕ ಶತ್ರುಗಳನ್ನು ಕೊಂದು

ಹಾಕಿದಳು. ಇಂದಿಗೂ ಚಿತ್ರದುರ್ಗದ ಕೋಟೆಯ ಪಶ್ಚಿಮದಲ್ಲಿ ವೀರವನಿತೆ ‘ಓಬವ್ವನ ಕಿಂಡಿ’ ಇದೆ.

ಸೋಲನ್ನೊಪ್ಪದ ಹೈದರಾಲಿಯು ಚಿತ್ರದುರ್ಗಕ್ಕೆ ಮತ್ತೊಮ್ಮೆ ಮುತ್ತಿಗೆಹಾಕಿದನು. ಭೀಕರ

ಯುದ್ಧವೊಂದು ನಡೆದು ಮದಕರಿಗೆ ಸೋಲಾಯಿತು. ಮದಕರಿಯ ಆಳ್ವಿಕೆಯ ನಂತರ ಚಿತ್ರದುರ್ಗದ

ನಾಯಕರ ವಂಶ ಅಳಿಯಿತು.


ಚಿತ್ರದುರ್ಗವು ಒಂದು ಆಕರ್ಷಕವಾದ ಗಿರಿದುರ್ಗವಾಗಿದ್ದು ಏಳು ಸುತ್ತಿನ ಕೋಟೆಯನ್ನು

ಹೊಂದಿದೆ. ಇದರ ಒಳಗಿನ ನಿವೇಶನದಲ್ಲಿ ಹಲವು ದೇವಾಲಯಗಳೂ ಕೆರೆಗಳೂ ಇವೆ.

ಚಿತ್ರದುರ್ಗದ ನಾಯಕರು ಹಲವಾರು ದೇವಾಲಯಗಳನ್ನು ಕಟ್ಟಿಸಿದರು. ಭರಮಸಾಗರ ಮತ್ತು

ಭೀಮಸಮುದ್ರ ಜಲಾಶಯಗಳು ಇವರ ಕೊಡುಗೆಗಳಾಗಿವೆ. ತಮ್ಮ ಶೌರ್ಯ, ಸಾಹಸಗಳಿಗೆ


ಚಿತ್ರದುರ್ಗದ ನಾಯಕರು ಖ್ಯಾತರಾಗಿದ್ದಾರೆ.


ಕಾಲಗಣನೆ (ಸಾ.ಶ.)

ಮತ್ತಿ ತಿಮ್ಮಣ್ಣ ನಾಯಕ - 1568-1589

ಬಿಚ್ಚುಗತ್ತಿ ಭರಮಣ್ಣ ನಾಯಕ - 1689-1721

ಹಿರೇಮದಕರಿ ನಾಯಕ - 1721-1749

ರಾಜಾವೀರ ಮದಕರಿ ನಾಯಕ - 1754-1779


I ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

1. ಮತ್ತಿ ತಿಮ್ಮಣ್ಣನಾಯಕ ಯಾರು?

2. ರಾಜವೀರ ಮದಕರಿನಾಯಕನನ್ನು ಕುರಿತು ಟಿಪ್ಪಣಿ ಬರೆಯಿರಿ.

3. ಒನಕೆ ಓಬವ್ವಳನ್ನು ನಾವು ಇಂದಿಗೂ ಏಕೆ ನೆನೆಯುತ್ತೇವೆ?

4. ಚಿತ್ರದುರ್ಗ ನಾಯಕರು ಕಟ್ಟಿಸಿದ ಕೆರೆಗಳನ್ನು ಹೆಸರಿಸಿ.


ಸುರಪುರ ನಾಯಕರು


ಯಾದಗಿರಿ ಜಿಲ್ಲೆಯ ಸುರಪುರವು ಕೃಷ್ಣಾ ಹಾಗೂ ಭೀಮಾ ನದಿಗಳ ಮಧ್ಯದಲ್ಲಿದೆ.

ಸಾ.ಶ 1636 ರಿಂದ 1858 ರ ವರೆಗೆ ಹನ್ನೆರಡು ಜನ ನಾಯಕ ಅರಸರು ಆಳ್ವಿಕೆ ಮಾಡಿದ್ದಾರೆ.

ಗಡ್ಡಿಪಿಡ್ಡನಾಯಕನು ಈ ಮನೆತನದ ಸ್ಥಾಪಕ. ಇವರ ಪೂರ್ವಜರು ವಿಜಯನಗರದ

ಸೈನ್ಯದಲ್ಲಿದ್ದವರು. ವಿಜಯನಗರದ ಅವನತಿಯಾದ ಮೇಲೆ ಬೇರೆ ಬೇರೆ ಕಡೆ ಚದುರಿದ ಗುಂಪುಗಳಲ್ಲಿ

ಇವರೂ ಒಬ್ಬರು. ಅನಂತರ ಬಿಜಾಪುರದ ಆದಿಲ್‍ಷಾಹಿಗಳಿಂದ ಸರದೇಶಗತಿಯನ್ನು ಪಡೆದು

ವಾಗಿನಗೇರಿಯಲ್ಲಿ ಆಡಳಿತ ಪ್ರಾರಂಭಿಸಿದರು. ಪೀತಾಂಬರಿ ಬಹರಿಪಿಡ್ಡನಾಯಕ(ಸಾ.ಶ. 1687-

1726)ನು ಸಾ.ಶ. 1707ರಲ್ಲಿ ಸುರಪುರವನ್ನು ನಿರ್ಮಿಸುವ ಮೂಲಕ ಇದನ್ನು ರಾಜಧಾನಿಯನ್ನಾಗಿ

ಮಾಡಿಕೊಂಡನು.


 ನಂತರ ಬ್ರಿಟಿಷರು ಮತ್ತು ಹೈದರಾಬಾದ್‍ನ ನಿಜಾಮನ ಒಪ್ಪಂದದಂತೆ ಈ ಸಂಸ್ಥಾನವು

ಅವರ ಅಧೀನಕ್ಕೆ ಬಂದಿತು. ರಾಜಾ ಕೃಷ್ಣಪ್ಪ ನಾಯಕನ ನಂತರ ಆತನ ಮಗನಾದ ರಾಜಾ ನಾಲ್ವಡಿ

ವೆಂಕಟಪ್ಪ ನಾಯಕನು (ಸಾ.ಶ. 1843-1858) ಅಧಿಕಾರಕ್ಕೆ ಬಂದನು. ಅದೇ ವೇಳೆಯಲ್ಲಿ ಉತ್ತರ

ಭಾರತದಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (ಸಾ.ಶ 1857) ದ ಕಾವು ಸುರಪುರವನ್ನು ತಟ್ಟಿತು.

ನಾಲ್ವಡಿ ವೆಂಕಟಪ್ಪ ನಾಯಕನು ದಕ್ಷಿಣ ಭಾರತದ ರಾಜರನ್ನೆಲ್ಲಾ ಒಂದುಗೂಡಿಸಿ ಬ್ರಿಟಿಷರ ವಿರುದ್ಧ

ಸಮರ ಸಾರಲು ಹವಣಿಕೆಯಲ್ಲಿದ್ದನು. ಅರಬ್, ರೋಹಿಲ್ಲರನ್ನು ಸೈನ್ಯದಲ್ಲಿ ಸೇರಿಸಿಕೊಂಡನು

ಅಲ್ಲದೇ ಸೈನ್ಯವನ್ನು ತರಬೇತಿಗೊಳಿಸಲು ಪ್ರಾರಂಭಿಸಿದನು. ಇದೆಲ್ಲದರ ಮಾಹಿತಿಯನ್ನು ಪಡೆದ

ಬ್ರಿಟಿಷ್ ಅಧಿಕಾರಿ ಥಾರ್ನ್‍ಹಿಲ್‍ನು 24ನೆಯ ಡಿಸೆಂಬರ್ 1857ರಂದು ಕ್ಯಾಪ್ಟನ್ ಕ್ಯಾಂಬಲ್‍ನಿಗೆ

ಪತ್ರ ಬರೆದು ಕ್ಷಿಪ್ರ ಕಾರ್ಯಾಚರಣೆಯನ್ನು ಕೈಗೊಳ್ಳಲು ಆದೇಶಿಸಿದನು.


ಬ್ರಿಟಿಷರ ಬಣವು 1858ರಲ್ಲಿ ಸುರಪುರದ ಮೇಲೆ ನುಗ್ಗಿತು. ಎರಡೂ ಬಣಗಳ

ನಡುವೆ ಗುಂಡಿನ ಚಕಮಕಿ ನಡೆಯಿತು. ರೊಚ್ಚಿಗೆದ್ದ ಸುರಪುರ ಸೈನ್ಯವು ಸ್ಟೂಆರ್ಟ್‍ನ ಮೂಳೆ

ಮುರಿಯಿತು. ನ್ಯೂಬೆರಿ ನೆಲಕ್ಕುರುಳಿದ. ಇತ್ತ, ನಾಲ್ವಡಿ ವೆಂಕಟಪ್ಪ ನಾಯಕ ವಿಶೇಷ ಅರಬ್,


ರೋಹಿಲ್‍ರ ಸೈನ್ಯವನ್ನು ತರಲು ಹೈದರಾಬಾದ್‍ಗೆ ಪ್ರಯಾಣ ಬೆಳೆಸಿದನು. ಅತ್ತ, ಬ್ರಿಟಿಷ್ ಪಡೆಯು

ಸುರಪುರದೊಳಗೆ ನುಗ್ಗಿತು. ಸುರಪುರವು ಪತನವಾಯಿತು. ಹೈದರಾಬಾದ್‍ನಲ್ಲಿ ಸುತ್ತಾಡುತ್ತಿದ್ದ

ನಾಲ್ವಡಿ ವೆಂಕಟಪ್ಪ ನಾಯಕನನ್ನು ನೋಡಿದ ವನಪರ್ತಿ ರಾಜನಿಂದ ಸುದ್ದಿಯನ್ನು ತಿಳಿದ

ಹೈದರಾಬಾದ್ ನಿಜಾಮನ ಪ್ರಧಾನಮಂತ್ರಿ ಸಾಲಾರಜಂಗನು, ಬ್ರಿಟಿಷರಿಂದ ತನಗೇನಾದರು

ಲಾಭ ಸಿಗಬಹುದೆಂದು ತಿಳಿದು ಆತನನ್ನು ಬ್ರಿಟಿಷರಿಗೆ ಒಪ್ಪಿಸಿದನು. ಬ್ರಿಟಿಷರು ನಾಲ್ವಡಿ ವೆಂಕಟಪ್ಪ

ನಾಯಕನನ್ನು ಸಿಕಂದರಾಬಾದ್‍ನಲ್ಲಿ ಬಂಧಿಸಿಟ್ಟರು. ನಂತರ ವಿಚಾರಣೆಗೊಳಪಡಿಸಿದರು. ಮರಣ

ದಂಡನೆಯ ಶಿಕ್ಷೆಯನ್ನು ವಿಧಿಸಿದಂತೆ ನಾಟಕವಾಡಿದರು.