Saturday, 9 January 2021

ಅರ್ಥಶಾಸ್ತ್ರ ಅಧ್ಯಾಯ - 1 ಅಭಿವೃದ್ಧಿ ಈ ಅಧ್ಯಾಯದಲ್ಲಿ ಕೆಳಗಿನ ಅಂಶಗಳನ್ನು ತಿಳಿಯುತ್ತೇವೆ.

 ಅರ್ಥಶಾಸ್ತ್ರ
ಅಧ್ಯಾಯ - 1
ಅಭಿವೃದ್ಧಿ
ಈ ಅಧ್ಯಾಯದಲ್ಲಿ ಕೆಳಗಿನ ಅಂಶಗಳನ್ನು ತಿಳಿಯುತ್ತೇವೆ.


· ಅಭಿವೃದ್ಧಿ ಮತ್ತು ಅನಾಭಿವೃದ್ಧಿಯ ಅರ್ಥ ಮತ್ತು ಸ್ವರೂಪ.

· ಮಾನವ ಅಭಿವೃದ್ಧಿಯ ಸೂಚಕಗಳು.

· ಲಿಂಗ ಸಂಬಂಧಿ ಅಭಿವೃದ್ಧಿ.


ನಾವು ನಮ್ಮ ಜೀವನದಲ್ಲಿ ನಿರಂತರ ಪ್ರಗತಿ ಸಾಧಿಸಲು ಪ್ರಯತ್ನಿಸುತ್ತಿರುತ್ತೇವೆ. ನಮ್ಮ ಆಶೋತ್ತರಗಳನ್ನು

ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಈಡೇರಿಸಿಕೊಂಡು, ಹಿಂದಿನಕ್ಕಿಂತ ಉತ್ತಮವಾಗಿರಲು ಬಯಸುತ್ತೇವೆ. ಅದೇ

ರೀತಿಯಲ್ಲಿ ಪ್ರತಿಯೊಂದು ಅರ್ಥವ್ಯವಸ್ಥೆಯು ಸಹ ಜನರಿಗೆ ಲಭ್ಯವಿರುವ ಸರಕು-ಸೇವೆಗಳ ಪ್ರಮಾಣವನ್ನು

ಹೆಚ್ಚಿಸಿ ಅವರ ಕಲ್ಯಾಣವನ್ನು ಉತ್ತಮಪಡಿಸುವ ಪ್ರಯತ್ನ ಮಾಡುತ್ತಿರುತ್ತದೆ. ಒಂದು ದೇಶದ ಎಲ್ಲರ

ಆಶೋತ್ತರಗಳನ್ನು ಈಡೇರಿಸುವ ಸಾಮಥ್ರ್ಯವನ್ನು ವಿಸ್ತರಿಸುವ ಈ ಪ್ರಕ್ರಿಯೆಯನ್ನು ಅಭಿವೃದ್ಧಿ ಎಂದು

ಕರೆಯುತ್ತೇವೆ. ಆದ್ದರಿಂದ, ಒಂದು ರಾಷ್ಟ್ರದ ಜನರ ಆರ್ಥಿಕ ಆಶೋತ್ತರಗಳನ್ನು ಪೂರೈಸುವ ಸಾಮಥ್ರ್ಯ ಹೆಚ್ಚಿಸಿ;

ಬಡತನ, ನಿರುದ್ಯೋಗ, ಅಸಮಾನತೆ, ಹಣದುಬ್ಬರಗಳಂಥ ಆರ್ಥಿಕ ಸಮಸ್ಯೆಗಳನ್ನು ನಿಯಂತ್ರಿಸುವುದನ್ನು

ಆರ್ಥಿಕ ಅಭಿವೃದ್ಧಿ ಎಂದು ಕರೆಯಬಹುದು.




1. ಅಭಿವೃದ್ಧಿ ಮತ್ತು ಅನಾಭಿವೃದ್ಧಿ


ಅಭಿವೃದ್ಧಿ: ಅಭಿವೃದ್ಧಿ ಎಂಬ ಪದವನ್ನು ನಾವು ನಿತ್ಯದ ಬದುಕಿನಲ್ಲಿ ಸಾಮಾನ್ಯವಾಗಿ ಬಳಸುತ್ತಿರುತ್ತೇವೆ.

ಯಾವುದೇ ಒಂದು ಕ್ಷೇತ್ರ ಇಲ್ಲವೇ ವ್ಯಕ್ತಿಗಳ ಪ್ರಗತಿಯನ್ನು ಸೂಚಿಸಲು ನಾವು ಸಾಮಾನ್ಯವಾಗಿ ‘ಅಭಿವೃದ್ಧಿ’

ಪದವನ್ನು ಬಳಸುತ್ತೇವೆ. ಉದಾ: ಗ್ರಾಮೀಣ ಅಭಿವೃದ್ಧಿ, ಸಾಮಾಜಿಕ ಅಭಿವೃದ್ಧಿ, ಶೈಕ್ಷಣಿಕ ಅಭಿವೃದ್ಧಿ, ಮಹಿಳಾ

ಮತ್ತು ಮಕ್ಕಳ ಅಭಿವೃದ್ಧಿ ಇತ್ಯಾದಿ. ಹಾಗೆಯೇ ಒಂದು ದೇಶದ ಆರ್ಥಿಕ ಚಟುವಟಿಕೆಗಳ ವಿಸ್ತರಣೆಯನ್ನು

ನಾವು ಆರ್ಥಿಕ ಅಭಿವೃದ್ಧಿ ಎಂದು ಗುರುತಿಸುತ್ತೇವೆ. ಆದರೆ ಆರ್ಥಿಕ ಅಭಿವೃದ್ಧಿಯು ಒಂದು ಸಂಕೀರ್ಣ

ವಿದ್ಯಮಾನವಾಗಿದ್ದು ಅದನ್ನು ಸರಳವಾಗಿ ವ್ಯಾಖ್ಯಾನಿಸಲು ಆಗುವುದಿಲ್ಲ.

ಪ್ರೊ. ಮೆಯರ್ ಮತ್ತು ಬಾಲ್ಡವಿನ್ ಅವರ ಪ್ರಕಾರ “ಒಂದು ರಾಷ್ಟ್ರದ ನೈಜ ರಾಷ್ಟ್ರೀಯ ವರಮಾನವು

ದೀರ್ಘಾವಧಿಯವರೆಗೆ ಹೆಚ್ಚಳವಾಗುವ ಪ್ರಕ್ರಿಯೆಯೇ ಆರ್ಥಿಕ ಅಭಿವೃದ್ಧಿ”ಯಾಗಿದೆ. ಈ ವ್ಯಾಖ್ಯಾನವು

ಆರ್ಥಿಕ ಅಭಿವೃದ್ಧಿಯ ಮೂರು ಅಂಶಗಳನ್ನು ಒತ್ತಿ ಹೇಳುತ್ತದೆ. ಅವೆಂದರೆ, ಆರ್ಥಿಕ ಅಭಿವೃದ್ಧಿಯು 1.

ಒಂದು ಪ್ರಕ್ರಿಯೆ; 2. ನೈಜ ರಾಷ್ಟ್ರೀಯ ವರಮಾನದ ಹೆಚ್ಚಳ; ಮತ್ತು 3. ದೀರ್ಘಾವಧಿ ಹೆಚ್ಚಳ. ಇವುಗಳನ್ನು


ಸಂಕ್ಷಿಪ್ತವಾಗಿ ಗಮನಿಸೋಣ:


ಚಿ) ಒಂದು ಪ್ರಕ್ರಿಯೆ: ಇಲ್ಲಿ ಪ್ರಕ್ರಿಯೆ ಎಂಬ ಪದವು ಉತ್ಪಾದನಾಂಗಗಳ ಪೂರೈಕೆ ಮತ್ತು ಸರಕು

ಸೇವೆಗಳ ಬೇಡಿಕೆಯಲ್ಲಿನ ಬದಲಾವಣೆಗಳನ್ನು ಸೂಚಿಸುತ್ತದೆ. ಉತ್ಪಾದನಾಂಗಗಳ ಪೂರೈಕೆಯು ಹೊಸ

ಸಂಪನ್ಮೂಲಗಳ ಶೋಧ, ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ, ಬಂಡವಾಳ ಸಂಚಯನ, ಜನಸಂಖ್ಯಾ ಬೆಳವಣಿಗೆ,

ಉತ್ತಮ ತಾಂತ್ರಿಕತೆಯ ಕಾರಣಗಳಿಂದಾಗಿ ಬದಲಾವಣೆಯಾಗುತ್ತವೆ. ಅದೇ ರೀತಿ ಜನಸಂಖ್ಯೆಯ ಬೆಳವಣಿಗೆ

ಮತ್ತು ಅದರ ಲಕ್ಷಣಗಳ ಬದಲಾವಣೆ, ವರಮಾನದ ಮಟ್ಟ ಹಾಗೂ ಅದರ ಹಂಚಿಕೆಯಲ್ಲಿನ ಬದಲಾವಣೆ,


 

ಜನರ ಅಭಿರುಚಿಗಳಲ್ಲಿನ ಬದಲಾವಣೆ, ಮುಂತಾದವುಗಳಿಂದಾಗಿ ಸರಕುಗಳ ಬೇಡಿಕೆಯಲ್ಲಿ ಬದಲಾವಣೆ

ಉಂಟಾಗುತ್ತದೆ. ಈ ಬದಲಾವಣೆಗಳು ರಾಷ್ಟ್ರೀಯ ವರಮಾನದ ಹೆಚ್ಚಳಕ್ಕೆ ಪೂರಕವಾಗುತ್ತವೆ.

b) ನೈಜ ರಾಷ್ಟ್ರೀಯ ವರಮಾನ: ರಾಷ್ಟ್ರೀಯ ವರಮಾನವು ಒಂದು ವರ್ಷದ ಅವಧಿಯಲ್ಲಿ ದೇಶದಲ್ಲಿ

ಉತ್ಪಾದಿಸಿದ ಎಲ್ಲ ಸರಕು-ಸೇವೆಗಳ ಒಟ್ಟು ಮೌಲ್ಯವಾಗಿದೆ. ಇದು ಆರ್ಥಿಕ ಅಭಿವೃದ್ಧಿಯ ಮಾಪನದ

ಪ್ರಮುಖ ಸಾಧನವಾಗಿದೆ. ರಾಷ್ಟ್ರೀಯ ವರಮಾನ ಹೆಚ್ಚಾಗಿದ್ದಷ್ಟೂ ಅಭಿವೃದ್ಧಿ ಹೆಚ್ಚು. ಆದರೆ ಇಲ್ಲಿ ‘ನೈಜ’É

ಎಂಬ ಪದದ ಮೇಲೆ ಒತ್ತು ನೀಡಲಾಗಿದ್ದು, ಅದು ಜನರ ಕೊಳ್ಳುವ ಶಕ್ತಿಯನ್ನು ಬಿಂಬಿಸುತ್ತದೆ. ಸಮಯ

ಕಳೆದ ಹಾಗೆ ಬೆಲೆಗಳು ಏರುವುದು ನಮಗೆಲ್ಲ ತಿಳಿದ ವಿಷಯ. ಈ ಏರಿದ ಬೆಲೆಗಳಲ್ಲಿ ನಾವು ಸರಕು

ಸೇವೆಗಳ ಮೌಲ್ಯಮಾಪನ ಮಾಡಿದಾಗ, ಆ ಮೌಲ್ಯಗಳು ಮತ್ತು ಅಂತೆಯೇ ವರಮಾನ ಹೆಚ್ಚಿದ ಹಾಗೆ

ತೋರುತ್ತವೆ. ಆದ್ದರಿಂದ ಆ ಹೆಚ್ಚಳದಲ್ಲಿ ಬೆಲೆ ಏರಿಕೆಯ ಪರಿಣಾಮವನ್ನು ಕಳೆಯಬೇಕಾಗುತ್ತದೆ. ಹಾಗೆ ಬೆಲೆ

ಬದಲಾವಣೆಗೆ ವರಮಾನವನ್ನು ಹೊಂದಾಣಿಕೆ ಮಾಡಿದಾಗ ನೈಜ ವರಮಾನ ಅಥವಾ ಹಣದ ವಾಸ್ತವಿಕ

ಖರೀದಿ ಸಾಮಥ್ರ್ಯ ದೊರಕುತ್ತದೆ. ಇದು ಅಭಿವೃದ್ಧಿಯನ್ನು ಪೋಷಿಸುವಲ್ಲಿ ಬೆಲೆಗಳ ಸ್ಥಿರತೆ ಕಾಯ್ದುಕೊಳ್ಳುವ

ಅವಶ್ಯಕತೆಯನ್ನು ಸೂಚಿಸುತ್ತದೆ.