Saturday, 9 January 2021

ವ್ಯವಹಾರ ಅಧ್ಯಯನ ಅಧ್ಯಾಯ - 3 ವ್ಯವಹಾರದ ಜಾಗತೀಕರಣ ಈ ಅಧ್ಯಾಯದಲ್ಲಿ ಕೆಳಗಿನ ಅಂಶಗಳನ್ನು ತಿಳಿಯುತ್ತೇವೆ.

  ವ್ಯವಹಾರ ಅಧ್ಯಯನ

 ಅಧ್ಯಾಯ - 3

 ವ್ಯವಹಾರದ ಜಾಗತೀಕರಣ 

ಈ ಅಧ್ಯಾಯದಲ್ಲಿ ಕೆಳಗಿನ ಅಂಶಗಳನ್ನು ತಿಳಿಯುತ್ತೇವೆ.

• ಜಾಗತೀಕರಣದ ಅರ್ಥ.

• ಜಾಗತೀಕರಣದಲ್ಲಿ ಅಡಕವಾಗಿರುವ ಅಂಶಗಳು.

• ಜಾಗತೀಕರಣದ ಮುಖ್ಯ ಲಕ್ಷಣಗಳು.

• ಜಾಗತೀಕರಣದ ಅನುಕೂಲತೆಗಳು.

• ಜಾಗತೀಕರಣದ ಅನಾನುಕೂಲಗಳು.

• ವಿಶ್ವವ್ಯಾಪಾರ ಸಂಸ್ಥೆ (W.ಖಿ.ಔ.)

ಜಾಗತೀಕರಣವು ವ್ಯವಹಾರ ಕ್ಷೇತ್ರಕ್ಕೆ ಹೆÇಸತೇನಲ್ಲ. 1870 ರಿಂದ 1913 ರ ತನಕ ಜಾಗತೀಕರಣವು

ವ್ಯವಹಾರ ಕ್ಷೇತ್ರದಲ್ಲಿ ಒಂದು ಪಾತ್ರವಹಿಸಿತ್ತು. ಆದರೆ 1980 ಜಾಗತೀಕರಣವು ತೀವ್ರಗತಿಯಲ್ಲಿ ಪ್ರಗತಿ ಸಾಧಿಸಿದ್ದು

ಅಭಿವೃದ್ಧಿಶೀಲ ರಾಷ್ಟ್ರಗಳ ಆರ್ಥಿಕ ಸುಧಾರಣೆಗಳಲ್ಲಿ ಬೆಳಕು ತಂದಿದೆ. ಇತ್ತೀಚಿಗೆ ವಿಶ್ವದಲ್ಲಿ ಉಂಟಾಗಿರುವ

ತಾಂತ್ರಿಕ ಮತ್ತು ಸಂಪರ್ಕ ಸಾಧನೆಗಳು ಮತ್ತು ಅಂತರ್ಜಾಲ ಸಂವಹನಗಳಿಂದಾಗಿ ದೊಡ್ಡ ವ್ಯವಹಾರ

ಘಟಕಗಳು ಜಾಗತಿಕ ಘಟಕಗಳಾಗಿವೆ. ಅಂದರೆ ಇವುಗಳ ಚಟುವಟಿಕೆಗಳು ಅವುಗಳ ಸ್ಥಾಪನಾ ಸ್ಥಳಕ್ಕೆ ಮಾತ್ರ

ಸೀಮಿತವಾಗಿರದೆ ವಿಶ್ವದಾದ್ಯಂತ ವಿಸ್ತರಿಸಲ್ಪಟ್ಟಿವೆ. ಇದರಿಂದಾಗಿ ಪ್ರಪಂಚದ ದೇಶಗಳ ಮಧ್ಯೆ ನಿಕಟ ಸಂಬಂಧ

ಮತ್ತು ಪರಸ್ಪರ ಅನ್ಯೋನ್ಯತೆ ಉಂಟಾಗಿ ವ್ಯವಹಾರ ಮತ್ತು ಮಾರುಕಟ್ಟೆಯು ವಿಶ್ವವ್ಯಾಪಿಯಾಗಿದೆ.


ಜಾಗತೀಕರಣದ ಅರ್ಥ :

ಅಂತರರಾಷ್ಟ್ರೀಯ ಹಣಕಾಸು ನಿಧಿಯು (Iಒಈ) ಜಾಗತೀಕರಣವನ್ನು ಈ ರೀತಿಯಾಗಿ ವ್ಯಾಖ್ಯಾನಿಸುತ್ತದೆ.

“ಸರಕು ಮತ್ತು ಸೇವೆಗಳು ಹಾಗೂ ಅಂತರರಾಷ್ಟ್ರೀಯ ಬಂಡವಾಳದ ಹರಿವು, ತೀವ್ರ ಮತ್ತು ವ್ಯಾಪಕವಾದ

ತಾಂತ್ರಿಕತೆಯ ಪ್ರಸರಣಗಳ ಮೂಲಕ ವಿಶ್ವದಾದ್ಯಂತ ಹೆಚ್ಚಿನ ಪ್ರಮಾಣದ ವೈವಿಧ್ಯತೆಯ ಗಡಿಯಾಚೆಗಿನ

ವ್ಯವಹಾರಗಳಿಂದಾಗಿ ಹೆಚ್ಚುತ್ತಿರುವ ದೇಶಗಳ ಅಂತರ ಸ್ವಾವಲಂಬನೆ”



ಈ ವ್ಯಾಖ್ಯೆಯಿಂದ ಸ್ವಷ್ಟವಾಗುವುದೇನೆಂದರೆ

• ಜಾಗತೀಕರಣವು ಸರಕು ಮತ್ತು ಸೇವೆಗಳ ಹೆಚ್ಚುತ್ತಿರುವ ಗಡಿಯಾಚೆಗಿನ ಚಲನೆ.

• ಬಂಡವಾಳದ, ತಾಂತ್ರಿಕತೆಯ ಮತ್ತು ಮಾಹಿತಿಯ ಅಂತರರಾಷ್ಟ್ರೀಯ ಹರಿವು.

• ಇಡೀ ವಿಶ್ವವನ್ನೇ ಒಂದು ಮಾರುಕಟ್ಟೆಯಾಗಿಸಿಕೊಂಡು ಕಚ್ಚಾ ವಸ್ತುಗಳು ಮತ್ತು ಇತರ

ಸಂಪನ್ಮೂಲಗಳನ್ನು ವಿಶ್ವದ ಅಗ್ಗವಾದ ಮಾರುಕಟ್ಟೆಯಿಂದ ಪಡೆಯುವುದು.

• ವಿಶ್ವದ ಯಾವುದೇ ಪ್ರದೇಶದಲ್ಲಿ ಕಡಿಮೆ ವೆಚ್ಚದಲ್ಲಿ ಸರಕುಗಳನ್ನು ಉತ್ಪಾದಿಸುವುದು.

132

ಜಾಗತೀಕರಣದಲ್ಲಿ ಅಡಕವಾಗಿರುವ ಅಂಶಗಳು

• ಜಾಗತೀಕರಣವು ವಿಶ್ವದಾದ್ಯಂತ ಆಧುನಿಕ ಸಂಪರ್ಕಜಾಲ, ಸಂಚಾರ ಸೌಲಭ್ಯಗಳು, ಕಾನೂನಿನ

ಮೂಲಭೂತ ಸ್ಥಿರತೆ ಹಾಗೂ ಪ್ರಜ್ಞಾಪೂರ್ವಕ ಆರ್ಥಿಕ, ತಾಂತ್ರಿಕ, ರಾಜಕೀಯ ಹಾಗೂ

ಸಂಸ್ಕøತಿಗಳಲ್ಲಿ ವಿನಿಮಯವನ್ನು ತೋರಿಸುವುದು.

• ರಾಜಕೀಯ ಅರಿಕೆಗಳಿಂದ ಗಡಿಭಾಗಗಳ ಸಂಬಂಧಗಳ ಮೂಲಕ ಅಂತರರಾಷ್ಟ್ರೀಯ ಬಂಡವಾಳ

ಮತ್ತು ವ್ಯಾಪಾರವನ್ನು ಪ್ರೆÇೀತ್ಸಾಹಿಸುವುದು.

• ಆಮದು ಮತ್ತು ರಪ್ತÅಗಳ ಸುಂಕಗಳನ್ನು ನಿರ್ಮೂಲನ ಮಾಡಿ ಮುಕ್ತ ವಲಯಗಳನ್ನು

ಸೃಷ್ಟಿಸುವುದು.

• ಸಾರಿಗೆ ವೆಚ್ಚವನ್ನು ಸಮುದ್ರಯಾನದಲ್ಲಿ ಕಂಟೈನರ್ ಸೇವೆಯ ಅಳವಡಿಕೆಯಿಂದ ಕಡಿಮೆ

ಮಾಡುವುದು.

• ಬಂಡವಾಳ ಹತೋಟಿಯನ್ನು ಕಡಿಮೆಗೊಳಿಸುವುದು ಅಥವಾ ನಿರ್ಮೂಲ ಮಾಡುವುದು.

• ವಿಶ್ವವ್ಯಾಪಿ ಸಂಸ್ಥೆಗಳಿಗೆ ಪ್ರೆÇೀತ್ಸಾಹ ದನ (Subsiಜies) ಸೃಷ್ಟಿಸುವುದು.

• ಅನೇಕ ದೇಶಗಳ ನಡುವೆ ಬೌದ್ಧಿಕ ಆಸ್ತಿ ಸಂಬಂಧ ಕಾಯಿದೆಗಳು ನಿರ್ಬಂಧಗಳಿಲ್ಲದೆ ಸಾಮರಸ್ಯ

ಉಂಟುಮಾಡುವುದು.

(ಉದಾ : ಚೀನಾದ ಕೆಲವು ಸಾಮ್ಯ ಪಡೆದಿರುವ (Pಚಿಣeಟಿಣ) ವಸ್ತುಗಳು ಅಮೆರಿಕದ ಕೆಲವು ಪ್ರಮುಖ

ಅಂಗಡಿಗಳಲ್ಲಿ ದೊರೆಯುತ್ತವೆ.)

ಜಾಗತೀಕರಣದ ಮುಖ್ಯ ಲಕ್ಷಣಗಳು

• ಜಾಗತೀಕರಣವು ವಿಶ್ವದ ಆರ್ಥಿಕತೆಯ ಏಳಿಗೆಗಿಂತ ತೀವ್ರವಾಗಿ ಅಂತರರಾಷ್ಟ್ರೀಯ ವ್ಯಾಪಾರವನ್ನು

ಹೆಚ್ಚಿಸುತ್ತದೆ.

• ಅಂತರರಾಷ್ಟ್ರೀಯ ಬಂಡವಾಳವನ್ನು ವೃದ್ಧಿಸಿ ಬಂಡವಾಳದ ಹರಿವನ್ನು ಮತ್ತು ಬಂಡವಾಳದ

ನೇರ ಹÇಡಿಕೆಯನ್ನು ಹೆಚ್ಚಿಸುತ್ತದೆ.

• ಅಂತರರಾಷ್ಟ್ರೀಯ ವ್ಯಾಪಾರ ಕರಾರುಗಳನ್ನು ಸೃಷ್ಟಿಸುತ್ತದೆ. ಇದರಿಂದಾಗಿಯೇ ವಿಶ್ವವ್ಯಾಪಾರ

ಸಂಸ್ಥೆಗಳುಪ್ರಾರಂಭವಾದುದು.

• ವಿಶ್ವ ಹಣಕಾಸಿನ ನೀತಿಯನ್ನು ಅಭಿವೃದ್ಧಿ ಪಡಿಸುತ್ತದೆ.

• ಅಂತರರಾಷ್ಟ್ರೀಯ ಸಂಸ್ಥೆಗಳಾದ ವಿಶ್ವವ್ಯಾಪಾರ ಸಂಘಟನೆ (Wಖಿಔ) ಮತ್ತು ಅಂತರರಾಷ್ಟ್ರೀಯ

ಹಣಕಾಸುನಿಧಿ (Iಒಈ)ಗಳ ಪಾತ್ರ ಹೆಚ್ಚಿಸುತ್ತದೆ.

• ಕೆಲವು ಆರ್ಥಿಕ ವ್ಯವಹಾರ ಪದ್ಧತಿಗಳಾದ ಹೊರನೆರವು (ಔuಣ souಡಿಛಿe) ಮುಂತಾದುವುಗಳನ್ನು

ಬಹುರಾಷ್ಟ್ರೀಯ ಸಂಸ್ಥೆಗಳ ಮೂಲಕ ಹೆಚ್ಚಿಸುತ್ತದೆ.

• ಅಂತರರಾಷ್ಟ್ರೀಯ ಸಾಂಸ್ಕøತಿಕ ವಿನಿಮಯಗಳನ್ನು ಹೆಚ್ಚು ಮಾಡುತ್ತದೆ.

• ವಿವಿಧ ಸಾಂಸ್ಕøತಿಕ ಪದ್ಧತಿಗಳನ್ನು ಹರಡಲು ಸಹಾಯ ಮಾಡುತ್ತದೆ.

• ಅಂತರರಾಷ್ಟ್ರೀಯ ಸಂಚಾರ ಮತ್ತು ಪರ್ಯಟನೆಗಳಿಗೆ ಅವಕಾಶಗಳನ್ನು ಒದಗಿಸುತ್ತದೆ.

• ದೇಶಗಳ ನಡುವೆ ವಲಸೆ ಹೋಗುವುದನ್ನು ಹೆಚ್ಚಿಸುತ್ತದೆ. ಇದು ಕಾನೂನು ಬಾಹಿರ ವಲಸೆಗಳಿಗೂ

ಅವಕಾಶ ಕಲ್ಪಿಸುತ್ತದೆ.

• ಸ್ಥಳೀಯ ಆಹಾರ ಪದಾರ್ಥಗಳು ಬೇರೆ ದೇಶಗಳಿಗೂ ಹಬ್ಬಲು ಸಾಧ್ಯವಾಗುತ್ತದೆ.

• ವಿಶ್ವವ್ಯಾಪಿ ಸಂವಹನ ಸಂದೇಶ, ಅಂತರ್ಜಾಲ ಮತ್ತು ಸಂಪರ್ಕ ಸಾಧನೆಗಳು ತಮ್ಮ ಮೂಲಭೂತ

ಸಾಧನೆಗಳೊಂದಿಗೆ ಗಡಿಗಳನ್ನು  ಸಹಾಯ ಮಾಡುತ್ತದೆ.

• ಮಾಹಿತಿಗಳ ವಿನಿಮಯ (ಇxಛಿhಚಿಟಿge oಜಿ ಆಚಿಣಚಿ) ತಾಂತ್ರಿಕತೆ, ಸೆಲ್‍ಪೆÇೀನುಗಳು ಅಂತರರಾಷ್ಟ್ರೀಯ

ದೂರ ಸಂಪರ್ಕ ಕ್ಷಿಪಣಿಗಳು ರೂಢಿಗೆ ಬರುತ್ತವೆ