Sunday, 3 January 2021

ಅಧ್ಯಾಯ-7 ಮಧ್ಯಯುಗದ ಯುರೋಪ್ ಈ ಅಧ್ಯಾಯದಲ್ಲಿ ಕೆಳಗಿನ ಅಂಶಗಳನ್ನು ತಿಳಿಯುತ್ತೇವೆ.

  ಅಧ್ಯಾಯ-7

ಮಧ್ಯಯುಗದ ಯುರೋಪ್

ಈ ಅಧ್ಯಾಯದಲ್ಲಿ ಕೆಳಗಿನ ಅಂಶಗಳನ್ನು ತಿಳಿಯುತ್ತೇವೆ.

• ಮಧ್ಯಯುಗದ ಯುರೋಪಿನ ಸ್ಥಿತಿಗತಿಗಳು

• ಊಳಿಗಮಾನ್ಯ ವ್ಯವಸ್ಥೆಯ ಅರ್ಥ

• ಊಳಿಗಮಾನ್ಯ ವ್ಯವಸ್ಥೆಯ ವಿವಿಧ ರೂಪಗಳು

• ಊಳಿಗಮಾನ್ಯ ವ್ಯವಸ್ಥೆಯ ಗುಣ ದೋಷಗಳು

• ಊಳಿಗಮಾನ್ಯ ವ್ಯವಸ್ಥೆಯ ಪತನ
ರೋಮನ್ ಸಾಮ್ರಾಜ್ಯದ ಪತನ


ಸಾ.ಶ.ಪೂ. 395ರವರೆಗೆ ಏಕೀಕೃತವಾಗಿದ್ದ ರೋಮನ್ ಸಾಮÁ್ರಜ್ಯವು, ನಂತರ ಎರಡು ಸಾಮ್ರಾಜ್ಯಗಳಾದವು.

ಸಾ.ಶ.ಪೂ. 395ರಿಂದ 476ರಲ್ಲಿ ರೋಮ್ಯುಲಸ್ ಆಗಸ್ಟ್ಯುಲಸ್’ನ ಪದಚ್ಯುತಿಯವರೆಗೆ ಪಶ್ಚಿಮ ಸಾಮ್ರಾಜ್ಯವು

ಅಸ್ತಿತ್ವದಲ್ಲಿತ್ತು. ಸಾ.ಶ.ಪೂ. 395ರಿಂದ 1453ವರೆಗೆ ಪೂರ್ವರೋಮನ್ ಸಾಮ್ರಾಜ್ಯವು ಅಸ್ತಿತ್ವದಲ್ಲಿತ್ತು.

ಪೂರ್ವರೋಮನ್ ಸಾಮ್ರಾಜ್ಯವನ್ನು ‘ಬೈಜಾಂಟೈನ್ ಸಾಮ್ರಾಜ್ಯ’ವೆಂದೂ ಕರೆಯಲಾಗುತ್ತದೆ. ಸಾ.ಶ.ಪೂ.

5ನೇ ಶತಮಾನದಿಂದ 15ನೆಯ ಶತಮಾನದವರೆಗೆ ಯೂರೋಪಿನ ಮಧ್ಯಯುಗವೆಂದು ಗುರುತಿಸಲಾಗಿದೆ.

ಪಶ್ಚಿಮ ರೋಮನ್ ಸಾಮ್ರಾಜ್ಯದ ಪತನದೊಂದಿಗೆ ಮಧ್ಯಯುಗದ ಪ್ರಾರಂಭವನ್ನು ಗುರುತಿಸಲಾಗುತ್ತದೆ.

ಸಾಮಾನ್ಯವಾಗಿ ಟರ್ಕರು ಕಾನ್‍ಸ್ಟೆಂಟಿನೋಪಲ್‍ನ್ನು ಸಾ.ಶ.ಪೂ. 1453ರಲ್ಲಿ ವಶಪಡಿಸಿಕೊಂಡ ವರ್ಷವನ್ನು

ಮಧ್ಯಯುಗದ ಕೊನೆಯೆಂದು ಭಾವಿಸಲಾಗಿದೆ.


ಮೊದಲಿಗೆ ಇಡೀ ಮಧ್ಯಯುಗವನ್ನು ‘ಅಂಧಕಾರ ಯುಗ’ವೆಂದು ಕರೆಯಲಾಗುತ್ತಿತ್ತು. ಮಧ್ಯಯುಗವನ್ನು

ಮೂರು - ಆರಂಭಿಕ, ಮಧ್ಯ ಮತ್ತು ಕೊನೆ - ಕಾಲಘಟ್ಟಗಳೆಂದು ವಿಭಜಿಸಿದ ನಂತರ ‘ಆರಂಭಿಕ

ಕಾಲಘಟ್ಟ’ವನ್ನು ಮಾತ್ರ ಈ ರೀತಿ ಗುರುತಿಸಲಾಗುತ್ತಿದೆ.


ಗ್ರೀಸ್‍ನ ನಗರ ರಾಜ್ಯಗಳ ರೀತಿಯಲ್ಲೇ ರೋಮ್ ಸಹ ‘ಪೆಟ್ರಿಷಿಯನ್’ರೆಂಬ ಜಮೀನ್ದಾರಿ ಆಳುವ ವರ್ಗದ

ಹಿಡಿತದಲ್ಲಿತ್ತು. ಎಲ್ಲಾ ರಾಜಕೀಯ ಹಕ್ಕುಗಳನ್ನು ‘ಸೆನೆಟ್’ ಹೆಸರಿನಲ್ಲಿ ಇವರು ಕೇಂದ್ರೀಕರಿಸಿಕೊಂಡಿದ್ದರು.

ರೋಮ್‍ನ ಬಡವರನ್ನು ‘ಪ್ಲೆಬಿಯನ್’ರೆಂದು ಕರೆಯಲಾಗುತ್ತಿತ್ತು. ಇವರಿಗೆ ಯಾವುದೇ ರಾಜಕೀಯ

ಹಕ್ಕುಗಳಿರಲಿಲ್ಲ. ಇವರು ಗುಲಾಮರಾಗಿದ್ದರು.


‘ಗುಲಾಮಗಿರಿ’ಯ ಹೆಸರಲ್ಲಿ ಆಳುವ ‘ಗುಲಾಮ ಒಡೆಯರು’ ಗುಲಾಮರನ್ನು ತಮ್ಮ ಖಾಸಗಿ ಆಸ್ತಿಯನ್ನಾಗಿ

ಮಾಡಿಕೊಂಡಿದ್ದರು. ಗುಲಾಮರ ಶ್ರಮವನ್ನು ಈ ಒಡೆಯರು ದೋಚುತ್ತಿದ್ದರು.ಪ್ರತಿ ಗುಲಾಮನೂ ಸಹ ಒಬ್ಬ

ನಿರ್ದಿಷ್ಟ ಒಡೆಯನ ಆಸ್ತಿಯಾಗಿದ್ದನು. ಗುಲಾಮರ ಕೆಲಸವು ಅತ್ಯಂತ ನಿಕೃಷ್ಟವಾಗಿತ್ತು. ಚಾಟಿಯ ಭೀತಿಯಲ್ಲೇ ಕೆಲಸ

ಮಾಡಬೇಕಿತ್ತು. ಕಲೆ, ಸಂಸ್ಕøತಿ ಮತ್ತು ತತ್ವಶಾಸ್ತ್ರದಂತಹ ಎಲ್ಲವೂ ಗುಲಾಮರ ದುಡಿಮೆಯಿಂದಲೇ ಸಾಧ್ಯವಾದದ್ದು

ಏಕೆಂದರೆ, ಗುಲಾಮರು ದುಡಿಯತ್ತಿದ್ದರು ಮತ್ತು ಗುಲಾಮ ಒಡೆಯರು ಬಿಡುವಾಗಿದ್ದರು.


ರೋಮನ್ ಸಾಮ್ರಾಜ್ಯದ ಪತನದ ನಂತರ ಯುರೋಪಿನಲ್ಲಿ ಮಧ್ಯಯುಗ ಆರಂಭವಾಯಿತು.

ಗ್ರೀಸ್, ರೋಮ್‍ಗಳ ಸತ್ವಯುತ ಸಾಂಸ್ಕøತಿಕ ಸಾಧನೆಗಳ ನಂತರ ಒಂದು ಸಾವಿರ ವರ್ಷದ ಐರೋಪ್ಯ


ಇತಿಹಾಸದಲ್ಲಿ ಸಾಂಸ್ಕøತಿಕವಾಗಿ ಬರಡುತನ ಕಾಣಿಸಿತು. ಇದನ್ನು ಅಂಧಕಾರಯುಗ (ಆಚಿಡಿಞ ಂges) ಎಂದೂ

ಕರೆಯುತ್ತಾರೆ. ಇದು ಜಗತ್ತಿನ ಇತಿಹಾಸದಲ್ಲಿ ಮಹತ್ವದ ಸ್ಥಿತ್ಯಂತರದ ಕಾಲ. ಈ ಕಾಲದಲ್ಲಿ ಬರ್ಬರ

ಜನಾಂಗಗಳ ಉದಯದೊಂದಿಗೆ ಊಳಿಗಮಾನ್ಯ ಪದ್ಧತಿಯು ಜನ್ಮ ಪಡೆಯಿತು.


ಊಳಿಗಮಾನ್ಯ ಪದ್ಧತಿ

ಚಟುವಟಿಕೆ :


ನಿಮ್ಮ ಗ್ರಾಮದ ಗ್ರಾಮಲೆಕ್ಕಿಗರನ್ನು

ಭೇಟಿ ಮಾಡಿ ಭೂ ಒಡೆತನ

ಪಡೆಯುವ ಬಗ್ಗೆ ಮಾಹಿತಿ ಸಂಗ್ರಹಿಸಿ.

ರೋಮನ್ ಸಾಮ್ರಾಜ್ಯದ ಪತನಾನಂತರ ಯುರೋಪಿನ

ಹಲವಾರು ದೇಶಗಳ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ

ವ್ಯವಸ್ಥೆಗಳು ಅಸ್ತವ್ಯಸ್ತವಾದವು. ರೋಮ್‍ನ ಚಕ್ರವರ್ತಿಯಾದ

ಚಾರ್ಲ್‍ಮನ್‍ನ ಮರಣಾನಂತರ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು.

ಅರಾಜಕತೆಯ ಅವ್ಯವಸ್ಥೆ ತಾಂಡವಾಡತೊಡಗಿ ಪ್ರಾಣ, ಆಸ್ತಿಪಾಸ್ತಿಗಳಿಗೆ

ರಕ್ಷಣೆ ಇಲ್ಲದಂತಾಯಿತು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಹೊಸ

ರಾಜಕೀಯ ಹಾಗೂ ಆರ್ಥಿಕ ವ್ಯವಸ್ಥೆ ಪಶ್ಚಿಮ ಯುರೋಪಿನಲ್ಲಿ ಉದಯವಾಯಿತು.


ಉಳುಮೆಗೆ ಯೋಗ್ಯವಾದ ಭೂಮಿಯನ್ನು ಕೃಷಿ ಮಾಡುವ ರೈತರನ್ನು ಜೀತ ವ್ಯವಸ್ಥೆಗೆ ಒಳಪಡಿಸಲಾಯಿತು.

ಇವರ ಮೇಲೆ ಅನೇಕ ಬಗೆಯ ನಿಯಂತ್ರಣಗಳನ್ನು ಹೇರಲಾಗಿತ್ತು. ಅವರ ಶ್ರಮಕ್ಕೆ, ಉತ್ಪಾದನೆಗೆ ಸರಿಯಾದ

ಪ್ರತಿಫಲ ಸಿಗುತ್ತಿರಲಿಲ್ಲ. ಬಾಡಿಗೆಯನ್ನು ಇವರಿಗೆ ಹಣದ ರೂಪದಲ್ಲಿ ನೀಡುವಾಗಲೂ ಆಳುವವರು ಅಧಿಕಾರದ

ಧರ್ಪವನ್ನು ತೋರುತ್ತಿದ್ದರು. ಇದು ಊಳಿಗಮಾನ್ಯ ವ್ಯವಸ್ಥೆ.


ಊಳಿಗಮಾನ್ಯ ವ್ಯವಸ್ಥೆಯು ರಾಜಕೀಯ ಹಾಗೂ ಆರ್ಥಿಕ ತಳಹದಿಯಲ್ಲಿ ರೂಪಿತವಾದ ಭೂಮಿಯ

ಒಡೆತನದ ವ್ಯವಸ್ಥೆಯಾಗಿತ್ತು. ಮಧ್ಯಯುಗದಲ್ಲಿ ಯುರೋಪಿನ ಒಬ್ಬ ವ್ಯಕ್ತಿಯ ಸ್ಥಾನಮಾನಗಳು ಅವನು

ಹೊಂದಿರುವ ಭೂಮಿಯ ಪ್ರಮಾಣದಿಂದ ನಿರ್ಧಾರವಾಗುತ್ತಿತ್ತು. ಅದಕ್ಕೆ ಕೇವಲ ಭೂಮಿಯೊಂದೇ

ಆದಾಯದ ಮೂಲವಾಗಿತ್ತು. ಸಹಜವಾಗಿ ಆ ಸಮಯದಲ್ಲಿ ರಾಜನು ತನ್ನ ವ್ಯಾಪ್ತಿಗೆ ಬರುವ ಭೂಮಿಯ

ಒಡೆಯನಾಗಿದ್ದನು. ರಾಜನು ನೋಬಲರಿಗೆ ಭೂಮಿಯನ್ನು ಹಂಚುತ್ತಿದ್ದನು. ನೋಬಲರು ಕೆಳಹಂತದ

ವ್ಯಕ್ತಿಗಳಿಗೆ ಭೂಮಿಯನ್ನು ಹಂಚುತ್ತಿದ್ದರು. ಒಟ್ಟಾರೆ ಹೇಳುವುದಾದರೆ ಊಳಿಗಮಾನ್ಯ ಪದ್ಧತಿಯು ನಿರ್ದಿಷ್ಟ

ಸೇವೆಗಳನ್ನು ಹೊಂದುವುದರ ಸಲುವಾಗಿ ಹುಟ್ಟಿಕೊಂಡ ವ್ಯವಸ್ಥೆಯಾಗಿತ್ತು.


ಊಳಿಗಮಾನ್ಯ ಪದ್ಧತಿಯು ಬಲಿಷ್ಠ ಹಾಗೂ ಅಶಕ್ತರ ನಡುವೆ ಇದ್ದಂತಹ ಒಪ್ಪಂದ ಎನ್ನಬಹುದು.

ಯಾವ ಬಲಿಷ್ಠನಾದ ವ್ಯಕ್ತಿ ಭೂಮಿಯ ಒಡೆತನವನ್ನು ಹೊಂದಿದ್ದನೋ ಅವನನ್ನು ‘ಧಣಿ’ (ಓobeಟ)

ಎಂದೂ, ಭೂಮಿಯನ್ನು ಹಿಡುವಳಿಯಾಗಿ ಪಡೆದಂತಹ ಅಶಕ್ತ ವ್ಯಕ್ತಿಯನ್ನು ‘ಹಿಡುವಳಿದಾರ’ (ಗಿಚಿssಚಿಟ)

ಎಂದೂ ಕರೆಯುವ ರೂಢಿಯಿತ್ತು. ಬಲಿಷ್ಠನಾದ ಧಣಿಯು ಅಶಕ್ತನನ್ನು ರಕ್ಷಿಸುವ ಹೊಣೆಯನ್ನು ಹೊಂದಿದ್ದರ

ಜೊತೆಗೆ ಹಿಡುವಳಿದಾರರಿಂದ ನಿರ್ದಿಷ್ಟವಾದ ಸೇವೆಗಳನ್ನು ಪಡೆಯುತ್ತಿದ್ದನು.