Monday, 4 January 2021

ಪ್ರಮುಖ ಖನಿಜಗಳು ಮತ್ತು ಕೈಗಾರಿಕೆಗಳು

ಪ್ರಮುಖ ಖನಿಜಗಳು ಮತ್ತು ಕೈಗಾರಿಕೆಗಳು


ಉತ್ತರ ಅಮೆರಿಕವು ಅಪಾರ ಸಂಪನ್ಮೂಲಗಳ ಕೊಡುಗೆಗೆ ಒಳಗಾಗಿದೆ. ಅದರ ನೈಸರ್ಗಿಕ

ಸಂಪನ್ಮೂಲಗಳೆಂದರೆ ವೈವಿಧ್ಯಮಯ ಮಣ್ಣುಗಳು, ವಿಸ್ತಾರವಾದ ಹುಲ್ಲುಗಾವಲು, ಖನಿಜ, ಶಕ್ತಿ

ಸಂಪನ್ಮೂಲಗಳು ಮತ್ತು ಅರಣ್ಯ ಸಂಪತ್ತುಗಳಾಗಿದೆ.





ಉತ್ತರ ಅಮೆರಿಕ ಭೂಖಂಡವು ವಿವಿಧ ಬೆಲೆಬಾಳುವ ಖನಿಜಗಳ ಅಧಿಕ ನಿಕ್ಷೇಪವನ್ನು

ಹೊಂದಿದೆ. ಇಲ್ಲಿರುವ ಚಿನ್ನದ ನಿಕ್ಷೇಪವು ಜನರನ್ನು ಈ ಖಂಡಕ್ಕೆ ಬಹು ಹಿಂದೆಯೇ ಆಕರ್ಷಿಸಿದೆ.

ಇದಲ್ಲದೆ ಕಬ್ಬಿಣದ ಅದಿರು, ತಾಮ್ರ, ನಿಕಲ್, ಬೆಳ್ಳಿ ಮತ್ತು ಸತುಗಳು ಇತರ ಪ್ರಮುಖವಾದ

ಖನಿಜ ನಿಕ್ಷೇಪಗಳಾಗಿವೆ. ಈ ಖಂಡವು ಸಾಕಷ್ಟು ಪ್ರಮಾಣದ ಕಲ್ಲಿದ್ದಲು, ಕಲ್ಲೆಣ್ಣೆ ಮತ್ತು ನೈಸರ್ಗಿಕ

ಅನಿಲಗಳನ್ನು ಹೊಂದಿದೆ.


ಕ್ಯಾಲಿಫೋರ್ನಿಯ ಮತ್ತು ಯೂಕಾನ್ ಕಣಿವೆಗಳು ಚಿನ್ನದ ಗಣಿಗಳ ಪ್ರಮುಖ ಪ್ರದೇಶಗಳಾಗಿವೆ.

ಸುಪೀರಿಯರ್ ಸರೋವರ ಮತ್ತು ಅದನ್ನು ಸುತ್ತುವರಿದಿರುವ ಪ್ರದೇಶಗಳು ಅಪಾರ ಪ್ರಮಾಣದ

ಕಬ್ಬಿಣದ ಅದಿರಿನ ನಿಕ್ಷೇಪಕ್ಕೆ ಪ್ರಖ್ಯಾತಿ ಪಡೆದಿವೆ. ಅತಿ ಉತ್ಕøಷ್ಟ ದರ್ಜೆಯ ಕಬ್ಬಿಣದ ಅದಿರನ್ನು


ಮೆಕ್ಸಿಕೊ ವಿಶ್ವದ ಪ್ರಮುಖ ಬೆಳ್ಳಿ ಉತ್ಪಾದಿಸುತ್ತಿರುವ ರಾಷ್ಟ್ರವಾಗಿದೆ. ಅಮೆರಿಕ ಸಂಯುಕ್ತ ಸಂಸ್ಥಾನವು

ಪ್ರಪಂಚದಲ್ಲಿ ಅತ್ಯಧಿಕ ತಾಮ್ರವನ್ನು ಉತ್ಪಾದಿಸುತ್ತಿರುವ ರಾಷ್ಟ್ರವಾಗಿದೆ. ಖಂಡದಾದ್ಯಂತ ಪಳೆಯುಳಿಕೆ

ಇಂಧನಗಳು ಸಾಧಾರಣ ಪ್ರಮಾಣದಲ್ಲಿ ಹಂಚಿಕೆಯಾಗಿರುವುದು ಕಂಡುಬರುತ್ತದೆ.

ಚಿನ್ನ ಕಬ್ಬಿಣದ ಅದಿರು

ಉಕ್ಕು ಕಲ್ಲಿದ್ದಲು


ತಾಮ್ರ ನಿಕಲ್

ಬೆಳ್ಳಿ ತವರ (ಸತುವು)

ಉತ್ತರ ಅಮೆರಿಕವು ಇಲ್ಲಿನ ಅಪಲೇಷಿಯನ್ ಪ್ರದೇಶದಲ್ಲಿ ಉತ್ತಮ ದರ್ಜೆಯ ಕಲ್ಲಿದ್ದಲ್ಲಿನ

ಅಧಿಕ ನಿಕ್ಷೇಪವನ್ನು ಹೊಂದಿದೆ. ಜಗತ್ತಿನ ಒಟ್ಟು ಕಲ್ಲಿದ್ದಲಿನ ಉತ್ಪಾದನೆಯಲ್ಲಿ ಶೇಕಡಾ 20ರಷ್ಟು

ಪೆನ್ಸಿಲ್ವೇನಿಯಾ ಒಂದೇ ಉತ್ಪಾದಿಸುವುದು. ಅಮೆರಿಕ ಸಂಯುಕ್ತ ಸಂಸ್ಥಾನವು ಪ್ರಪಂಚದ ಅತ್ಯಧಿಕ

ಕಲ್ಲಿದ್ದಲನ್ನು ರಫ್ತು ಮಾಡುತ್ತಿರುವ ದೇಶವಾಗಿದೆ. ಅಲಾಸ್ಕಾ, ಟೆಕ್ಸಾಸ್, ಲೂಷಿಯಾನ, ಕಾನ್ಸಾಸ್

ಮತ್ತು ಪಶ್ಚಿಮ ಕೆನಡಾದಲ್ಲಿ ಮತ್ತು ಮೆಕ್ಸಿಕೊದ ಕೆಲವು ಭಾಗಗಳಲ್ಲಿ ತೈಲ ಮತ್ತು ನೈಸರ್ಗಿಕ

ಅನಿಲವಿರುವುದು ಕಂಡುಬಂದಿವೆ. ಪೆಸಿಫಿಕ್ ಮಹಾಸಾಗರದಂಚಿನ ಪ್ರದೇಶಗಳು ನೈಸರ್ಗಿಕ ಅನಿಲದ

ಅಧಿಕ ನಿಕ್ಷೇಪವನ್ನು ಹೊಂದಿವೆ. ಅಮೆರಿಕ ಸಂಯುಕ್ತ ಸಂಸ್ಥಾನವು ಪ್ರಮುಖ ಪೆಟ್ರೋಲಿಯಂ

ಉತ್ಪಾದಿಸುತ್ತಿರುವ ರಾಷ್ಟ್ರವಾಗಿದೆಯಲ್ಲದೆ ವಿಶ್ವದಲ್ಲಿ ಅಧಿಕ ಅಣುಶಕ್ತಿಯನ್ನು ಉತ್ಪಾದಿಸುತ್ತಿರುವ

ದೇಶವೂ ಆಗಿದೆ.



ಹೆಚ್ಚು ಕೈಗಾರಿಕೀಕರಣಕ್ಕೊಳಪಟ್ಟಿವೆ. ಇಲ್ಲಿ ಲಭ್ಯವಿರುವ ಕಬ್ಬಿಣದ ಅದಿರು, ಕಲ್ಲಿದ್ದಲು, ತಾಮ್ರ,

ಬಾಕ್ಸೈಟ್‍ಗಳಂತಹ ಕಚ್ಚಾ ವಸ್ತುಗಳು ಭಾರಿ ಕೈಗಾರಿಕೆಗಳಿಗೆ ಸಹಾಯಕವಾಗಿವೆ. ಶಕ್ತಿ, ಸಾರಿಗೆ ಮತ್ತು

ಆಧುನಿಕ ತಾಂತ್ರಿಕತೆಗಳ ಲಭ್ಯತೆಯು ವಿಸ್ತøತ ಕೈಗಾರಿಕೀಕರಣಕ್ಕೆ ಕಾರಣವಾಗಿದೆ.

ಐರಿ, ಸುಪೀರಿಯರ್ ಮತ್ತು ಮಿಚಿಗನ್ ಸರೋವರಗಳ ಪ್ರದೇಶಗಳಲ್ಲಿ ಕಬ್ಬಿಣ ಮತ್ತು ಉಕ್ಕಿನ

ಕೈಗಾರಿಕೆಗಳು ಉತ್ತಮವಾಗಿ ಅಭಿವೃದ್ಧಿಗೊಂಡಿರುವುದನ್ನು ಕಾಣಬಹುದು. ಇದಕ್ಕೆ ಇಲ್ಲಿನ ಕಚ್ಚಾವಸ್ತು

ಮತ್ತು ಜಲಸಾರಿಗೆಗಳು ಸಹಾಯಕವಾಗಿವೆ. ಯು.ಎಸ್.ಎದಲ್ಲಿ ಅನುಕೂಲಕರವಾದ ಕೈಗಾರಿಕಾ

ನೀತಿಯು ಕೈಗಾರಿಕೆಗಳ ಬೆಳವಣಿಗೆಗೆ ಸಹಾಯಕವಾಗಿದೆ. ಇಲ್ಲಿನ ಪಿಟ್ಸ್‍ಬರ್ಗ್ ನಗರವನ್ನು `ಉಕ್ಕಿನ

ನಗರ' ಎಂದು ಕರೆಯಲಾಗಿದೆ. ಇದಕ್ಕೆ ಕಾರಣ ಅಪಲೇಷಿಯನ್ ಪ್ರದೇಶದಲ್ಲಿ ದೊರೆಯುವ

ಸಂಪದ್ಭರಿತವಾದ ಕಲ್ಲಿದ್ದಲು ನಿಕ್ಷೇಪಗಳು, ಜಲವಿದ್ಯುಚ್ಛಕ್ತಿ ಮತ್ತು ಬೃಹತ್ ಪ್ರಮಾಣದ ಸರಕುಗಳನ್ನು

ಸಾಗಿಸಲು ಉತ್ತಮ ಸಾರಿಗೆ ಸೌಲಭ್ಯವಿರುವುದು. ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಯು ಮೂಲ

ಕೈಗಾರಿಕೆಯಾದ್ದರಿಂದ ಇದು ಇತರ ಕೈಗಾರಿಕೆಗಳಾದ ಆಟೋಮೊಬೈಲ್, ಹಡಗು ನಿರ್ಮಾಣ,

ಲೋಕೋಮೋಟೀವ್ಸ್, ಭಾರಿ ಇಂಜಿನಿಯರಿಂಗ್, ವಿಮಾನ ನಿರ್ಮಾಣ ಮುಂತಾದ ಕೈಗಾರಿಕೆಗಳ

ಅಭಿವೃದ್ಧಿಗೆ ಸಹಾಯಕವಾಗಿದೆ.


 ಪಿಟ್ಸ್‍ಬರ್ಗ್ - ಉಕ್ಕಿನ ನಗರ


ಕಾರ್ಡ್‍ಬೋರ್ಡ್ ಮತ್ತು ನ್ಯೂಸ್‍ಪ್ರಿಂಟ್‍ಕಾಗದಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ.

ಮರದ ತಿರುಳನ್ನು ಕೃತಕ ನಾರು ತಯಾರಿಕೆಯಲ್ಲಿ ಬಳಸುವರು. ಕಾಗದ, ಮರದ ತಿರುಳು ಮತ್ತು

ನ್ಯೂಸ್‍ಪ್ರಿಂಟ್‍ಕಾಗದಗಳ ರಫ್ತಿನಲ್ಲಿ ಕೆನಡವು ಅತಿ ಪ್ರಮುಖ ರಾಷ್ಟ್ರವಾಗಿದೆ. ಮರಕಡಿಯುವಿಕೆ

ಉತ್ತರ ಅಮೆರಿಕದಲ್ಲಿ ಉತ್ತಮ ಸಂಘಟಿತ ವೃತ್ತಿಯಾಗಿದೆ. ಕೆನಡದಲ್ಲಿ ಮರಕಡಿಯುವ ವೃತ್ತಿಯನ್ನು


ಅವಲಂಬಿಸಿರುವ ಜನರನ್ನು ಲಂಬರ್ ಜಾಕ್ಸ್ ಎಂದು ಕರೆಯಲಾಗುತ್ತದೆ. ರಾಸಾಯನಿಕ ಕೈಗಾರಿಕೆಯು


ಉತ್ಪಾದಿಸುತ್ತದೆ. ಈಗ ಮರದ ಬದಲಾಗಿ ಪ್ಲಾಸ್ಟಿಕ್‍ನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಅಮೆರಿಕ ಸಂಯುಕ್ತ

ಸಂಸ್ಥಾನದ ಎಲ್ಲಾ ಭಾಗಗಳಲ್ಲಿಯೂ ಪ್ಲಾಸ್ಟಿಕ್‍ನ್ನು ತಯಾರಿಸಲಾಗುತ್ತಿದೆ. ಚಿಕಾಗೊ ನಗರವು ಪ್ಲಾಸ್ಟಿಕ್

ಕೈಗಾರಿಕೆಗೆ ಹೆಸರುವಾಸಿಯಾಗಿದೆ.