Tuesday, 5 January 2021

ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು

 ಅಧ್ಯಾಯ-4

ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು


ಈ ಅಧ್ಯಾಯದಲ್ಲಿ ಕೆಳಗಿನ ಅಂಶಗಳನ್ನು ತಿಳಿಯುತ್ತೇವೆ.


· ಹೈದರಾಲಿ ಮತ್ತು ಟಿಪ್ಪುಸುಲ್ತಾನ್ · ಆಂಗ್ಲೋ-ಮೈಸೂರು ಯುದ್ಧಗಳು

· ದೊಂಡಿಯಾವಾಘ್ · ಕಿತ್ತೂರಿನ ಬಂಡಾಯ - ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ

· ಅಮರ ಸುಳ್ಯ ಬಂಡಾಯ · ಸುರಪುರ ಬಂಡಾಯ

· ಹಲಗಲಿ ಬೇಡರ ದಂಗೆ


ಇಂದಿನ ಕರ್ನಾಟಕವು ಏಕೀಕರಣದ ಪೂರ್ವದಲ್ಲಿ ವಿವಿಧ ರಾಜಕೀಯ ಅಧಿಕಾರಶಾಹಿಗಳಲ್ಲಿ ಹಂಚಿ

ಹೋಗಿತ್ತು. 18ನೇ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷರು ರಾಜಕೀಯ ಅಧಿಪತ್ಯವನ್ನು ಸಾಧಿಸುವ

ಜೊತೆಜೊತೆಯಲ್ಲಿ ವ್ಯಾಪಾರ ಮತ್ತು ಕೃಷಿ ಕ್ಷೇತ್ರಗಳಲ್ಲಿ ಜನರನ್ನು ತಮ್ಮ ಹಿತಾಸಕ್ತಿಗಳಿಗಾಗಿ ಶೋಷಿಸಲು

ತೊಡಗಿದರು. ಈ ಶೋಷಣೆಗಳು ಕರ್ನಾಟಕವೂ ಸೇರಿದಂತೆ ವಿವಿಧ ಭಾಗಗಳಲ್ಲಿ ಅಸ್ಥಿರತೆಯನ್ನು ಸೃಷ್ಟಿಸಿದವು.

ದೇಶೀ ರಾಜರು ರಾಜಕೀಯ ಅಸ್ಥಿರತೆಯನ್ನು ಅನುಭವಿಸತೊಡಗಿದರು. ಇದರಿಂದ ಕರ್ನಾಟಕದ ಬಹುತೇಕ

ಭಾಗಗಳು ಬ್ರಿಟಿಷರ ವಿರುದ್ಧ ಬಂಡೇಳಲು ಆರಂಭಿಸಿದವು. ಹೀಗಾಗಿ ಆರಂಭದಲ್ಲಿ ಜಮೀನ್ದಾರರು, ಸಂಸ್ಥಾನದ

ರಾಜರು ಮುಂತಾದವರು ತಮ್ಮಲ್ಲಿಯ ಯಾವುದೇ ಐಕ್ಯತೆಯನ್ನು ಸಾಧಿಸಲು ಪ್ರಯತ್ನಿಸದೆ ಒಬ್ಬೊಬ್ಬರಾಗಿಯೆ

ವಿಘಟಿತ ರೂಪದಲ್ಲಿ ಬ್ರಿಟಿಷರ ವಿರುದ್ಧ ಬಂಡೇಳುವ ಪ್ರಯತ್ನ ಮಾಡಿದರು. ಈ ಹಿನ್ನೆಲೆಯಲ್ಲಿ ಮೈಸೂರು

ರಾಜ್ಯದ ರಾಜಕೀಯ ಸಂಕ್ರಮಣವನ್ನು ಬಳಸಿಕೊಂಡ ಹೈದರಾಲಿ ಮತ್ತು ಅವನ ಮಗ ಟೀಪ್ಪುಸುಲ್ತಾನರು ಬ್ರಿಟಿಷರ

ವಿರುದ್ಧ ದಕ್ಷಿಣ ಭಾರತದಲ್ಲಿ ಆರಂಭಿಕವಾದ ಬಹುದೊಡ್ಡ ಪ್ರತಿರೋಧವನ್ನು ಒಡ್ಡಿದರು. ರಾಜಕೀಯವಾಗಿ

ಸೃಷ್ಟಿಯಾದ 1761 - 1799ರ ನಡುವಿನ ಕಾಲಘಟ್ಟದ ಇವರ ಪ್ರಯತ್ನ ಚರಿತ್ರೆಯಲ್ಲಿ ಒಂದು ವಿಶೇಷವಾದ

ಪರ್ವ. ಇವರ ಪ್ರಯತ್ನ ಬ್ರಿಟಿಷ್ ವಿರೋಧಿ ಬಂಡಾಯದ ಆರಂಭಿಕ ಅಧ್ಯಾಯ.


ಹೈದರಾಲಿ ಮತ್ತು ಟಿಪ್ಪುಸುಲ್ತಾನಭಾರತದ ಚರಿತ್ರೆಯಲ್ಲಿ 18ನೇ ಶತಮಾನ ‘ರಾಜಕೀಯ ಸಮಸ್ಯೆಗಳ ಶತಮಾನ’ವೆಂದೇ ಚಿತ್ರಿಸಲ್ಪಟ್ಟಿದೆ.

ಇದಕ್ಕೆ ಅನೇಕ ಕಾರಣÀಗಳಿವೆ. ಮೊಘಲ್ ಚಕ್ರವರ್ತಿ ಔರಂಗಜೇಬ್‍ನ ಮರಣ 1707ರಲ್ಲಿ ಸಂಭವಿಸಿದ್ದು

ಇದಕ್ಕೆ ಪ್ರಮುಖ ಕಾರಣವಾಗಿದೆ. ಆತನ ಮರಣ ಮೊಘಲರ ರಾಜಕೀಯ ಸಾರ್ವಭೌಮತ್ವವನ್ನು ಕುಗ್ಗಿಸಿತು.

ಇದರಿಂದಾಗಿ ದಕ್ಷಿಣ ಭಾರತದಲ್ಲಿ ಮೊಘಲರ ರಾಜಕೀಯ ಹತೋಟಿ ತಪ್ಪಿತು. ಕರ್ನಾಟಿಕ್ ಪ್ರದೇಶದಲ್ಲಿ

ಅಧಿಕಾರಕ್ಕಾಗಿ ಕಿತ್ತಾಟಗಳು ಆರಂಭವಾದವು. ಇದಕ್ಕೂ ಮುನ್ನ 1704ರಲ್ಲಿ ಸಂಭವಿಸಿದ ಚಿಕ್ಕದೇವರಾಜ

ಒಡೆಯರ ಮರಣ ಮೈಸೂರು ರಾಜ್ಯದ ರಾಜಕೀಯ ಬೆಳವಣಿಗೆಯ ಮೇಲೆ ದುಷ್ಟರಿಣಾಮಗಳನ್ನು ಬೀರಿತು.

ಈತನ ಮರಣದಿಂದಾಗಿ ಉತ್ತರಾಧಿಕಾರತ್ವ ಸಮಸ್ಯೆ ಕಂಡುಬಂದಿದ್ದರ ಜೊತೆಗೆ ಆಡಳಿತವೂ ಕುಸಿಯಿತು.

ಈ ಬೆಳವಣಿಗೆಗಳು ಆ ಕಾಲದ ಮೈಸೂರಿನ ರಾಜಕೀಯವನ್ನು ಮುಸುಕುಗೊಳಿಸಿದವು. ಈ ರೀತಿಯ ಅತಂತ್ರ

ಸನ್ನಿವೇಶಗಳ ಹಿನ್ನೆಲೆಯಲ್ಲಿದ್ದ ಮೈಸೂರು ಮತ್ತು ಕರ್ನಾಟಕ ರಾಜ್ಯಗಳ ಭೂ ಪ್ರದೇಶದಲ್ಲಿ ಹೈದರಾಲಿ

ರಾಜಕೀಯ ಪ್ರಮುಖ್ಯತೆಯನ್ನು ಗಳಿಸಿದನು.


ಹೈದರಾಲಿ ಇವನು ಒಬ್ಬ ಸಾಮಾನ್ಯ ಸೈನಿಕನಾಗಿ ಮೈಸೂರು ರಾಜ್ಯದ ಸೇವೆಗೆ

ಸೇರಿದ ವ್ಯಕ್ತಿ ತನ್ನ ಚಾಣಾಕ್ಷ ರಾಜಕೀಯ ನಡೆಗೆ ಹೆಸರಾಗಿದ್ದನು. ಮೈಸೂರಿನ

ರಾಜಕೀಯ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಇವನು

ದೇವನಹಳ್ಳಿ ಮುತ್ತಿಗೆ ಸಂದರ್ಭ ಮತ್ತು ಅರ್ಕಾಟಿನ ನಿಜಾಮನ ವಿಷಯಕ್ಕೆ

ಸಂಬಂಧಿಸಿದ ಸೈನಿಕ ಕಾರ್ಯಾಚರಣೆಯಲ್ಲಿ ಪ್ರವರ್ಧಮಾನಕ್ಕೆ ಬಂದನು.

ಸೈನಿಕರನ್ನು ತನ್ನ ವಿಶ್ವಾಸಕ್ಕೆ ಪಡೆದುಕೊಳ್ಳುವಲ್ಲಿ ಸಫಲನಾದನು. ಬಹುಬೇಗನೆÀ

ನವಾಬ್ ಹೈದರಾಲಿಖಾನ್ ಎಂದೂ ಹೆಸರಾದನು. ಶಸ್ತ್ರಗಳ ಉಪಯೋಗ

ಮತ್ತು ಪ್ರಯೋಗಗಳಲ್ಲಿ ಖ್ಯಾತಿಗಳಿಸಿದನು. ಮಾತ್ರವಲ್ಲದೆ ಚುರುಕಿನ ಸೈನಿಕ

ಕಾರ್ಯಾಚರಣೆಗಳ ಮೂಲಕ ದಳವಾಯಿಗಳ ಬಲ ಕುಂದಿಸಿದನು ಮತ್ತು

ಅರಸರಾಗಿದ್ದ ಎರಡನೇ ಕೃಷ್ಣರಾಜ ಒಡೆಯರವರನ್ನು ಮೂಲೆಗುಂಪಾಗಿಸಿ

ಅಧಿಕಾರದ ಮೇಲೆ ತನ್ನ ಸ್ವಾಮ್ಯವನ್ನು ಸ್ಥಾಪಿಸಿದನು. ಮರಾಠರು,


ಹೈದರಾಬಾದಿನ ನಿಜಾಮ ಮತ್ತು ಅರ್ಕಾಟಿನ ನವಾಬರು ತಮ್ಮ ರಾಜಕೀಯ


ಅಸ್ತಿತ್ವ ಮತ್ತು ಮೇಲ್ಮೈ ಸಾಧನೆಗಾಗಿ ಹೋರಾಟಗಳಲ್ಲಿ ನಿರತರಾಗಿದ್ದರು. ಈ ಸಂಕ್ರಮಣದ ಸಂದರ್ಭವನ್ನು

ತಮ್ಮ ರಾಜಕೀಯ ಪ್ರಾಬಲ್ಯಕ್ಕಾಗಿ ಬ್ರಿಟಿಷರು ಮತ್ತು ಫ್ರೆಂಚರು ಬಳಸಿಕೊಳ್ಳತೊಡಗಿದರು. ಈ ಹಿನ್ನೆಲೆಯಲ್ಲಿ,

ಹೈದರಾಲಿ ಮತ್ತು ಟೀಪ್ಪು ಅವರ ಅವಧಿಯಲ್ಲಿ ಸಂಭವಿಸಿದ ಆಂಗ್ಲೋ-ಮೈಸೂರು ಯುದ್ಧಗಳು ಮತ್ತು

ಅದಕ್ಕೆ ಪ್ರೇರಣೆ ಒದಗಿಸಿದ ರಾಜಕೀಯ ಬೆಳವಣಿಗೆಗಳನ್ನು ನಾವು ತಿಳಿಯೋಣ.


ಮೊದಲನೆಯ ಆಂಗೋ ಮೈಸೂರು ಯುದ್ಧ : ಕ್ರಿ.ಶ.1767ರಲ್ಲಿ ಪ್ರಾರಂಭವಾದ ಇದು

1769ರಲ್ಲಿ ಅಂತ್ಯಗೊಂಡಿತು. ದಕ್ಷಿಣ ಭಾರತದಲ್ಲಿ ಹೈದರಾಲಿ ಗಳಿಸುತ್ತಿದ್ದ ರಾಜಕೀಯ ಪ್ರಾಬಲ್ಯ ಬ್ರಿಟಿಷರು,

ಹೈದರಾಬಾದಿನ ನಿಜಾಮ ಮತ್ತು ಮರಾಠರಲ್ಲಿ ರಾಜಕೀಯ ಅಸಹನೆ ಮೂಡಿಸಿತು. ಹೀಗಾಗಿ ಬ್ರಿಟಿಷರು ತಮ್ಮ

ಸಾಮ್ರಾಜ್ಯಷಾಹಿ ಧೋರಣೆಗೆ ಮುಳ್ಳಾಗಿ ಪರಿಣಮಿಸಿದ್ದ ಹೈದರಾಲಿಯನ್ನು ರಾಜಕೀಯವಾಗಿ ಹಣಿಯಲು

ತಂತ್ರಗಳನ್ನು ಮಾಡಲಾರಂಭಿಸಿದರು. ಮರಾಠರ ದಾಳಿಯಿಂದ ರಾಜಕೀಯ ಮತ್ತು ಆರ್ಥಿಕ ನಷ್ಟವನ್ನು

ಅನುಭವಿಸಿದ ಹೈದರಾಲಿ ಮರಾಠರು ಮತ್ತು ನಿಜಾಮನನ್ನು ತನ್ನೆಡೆಗೆ ಸೆಳೆದುಕೊಳ್ಳಲು ಯತ್ನಿಸಿದನಾದರೂ

ಈ ಪ್ರಯತ್ನದಲ್ಲಿ ವಿಫಲನಾದನು.


ಹೈದರ್ ಆಲಿಯ ವಿರುದ್ಧ ಬ್ರಿಟಿಷರು, ಮರಾಠರು ಮತ್ತು ನಿಜಾಮನೊಂದಿಗೆ ಒಪ್ಪಂದ ಮಾಡಿಕೊಂಡರು. ಇದರನ್ವಯ ತ್ರಿಪಕ್ಷ ಒಕ್ಕೂಟ ರಚಿಸಲ್ಪಟ್ಟಿತು. ಆದರೆ ಹೈದರಾಲಿ ತನ್ನ ಚಾಣಾಕ್ಷ್ಯ ರಾಜಕೀಯ ತಂತ್ರಗಳನ್ನು ಪ್ರಯೋಗಿಸುವ ಮೂಲಕ ತನ್ನ ವಿರುದ್ಧ ರಚನೆಯಾಗಿದ್ದ ಮಿತ್ರಕೂಟವನ್ನು ಒಡೆದು ಮರಾಠರು ಮತ್ತು ನಿಜಾಮನನ್ನು ಬ್ರಿಟಿಷರ ವಿರುದ್ಧ ಎತ್ತಿಕಟ್ಟುವಲ್ಲಿ ಯಶಸ್ವಿಯಾದನು. 


ಈ ನಡುವೆ ಆರ್ಕಾಟ್‍ನಲ್ಲಿ ರಾಜಕೀಯ ಸಮಸ್ಯೆಗಳು ಕಂಡುಬಂದವು. 1767ರಲ್ಲಿ ಹೈದರಾಲಿ ಮತ್ತು ನಿಜಾಮ, ಬ್ರಿಟಿಷರ ಆಶ್ರಿತ ದೇಶೀಯ ರಾಜ್ಯವಾಗಿದ್ದ ಆರ್ಕಾಟಿಗೆ ಮುತ್ತಿಗೆ ಹಾಕಿದರು. ಇದರಿಂದಾಗಿ ಯುದ್ಧ ಪ್ರಾರಂಭವಾಯಿತು. ತಿರುಚನಾಪಳ್ಳಿ, ತಿರುವಣ್ಣಾಮಲೈ, ಅಂಬೂರು ಮೊದಲಾದ ಸ್ಥಳಗಳಲ್ಲಿ ಕದನಗಳು ಸಂಭವಿಸಿದವು. ಈ ಸಂದರ್ಭದಲ್ಲಿ ಹೈದರಾಲಿ ಮಿಂಚಿನ ಸೈನಿಕ ಕಾರ್ಯಾಚರಣೆಗಳನ್ನು ನಡೆಸಿದನು. ಬ್ರಿಟಿಷ್ ಸೈನ್ಯ ಅನೇಕ ಸ್ಥಳಗಳನ್ನು ವಶಪಡಿಸಿಕೊಂಡಿತು. ಹೈದರ್ ತಾತ್ಕಾಲಿಕ ಹಿನ್ನೆಡೆ ಅನುಭವಿಸಿದನು. ಮುಂಬಯಿಯ ಬ್ರಿಟಿಷ್ ಸೈನ್ಯ ರಂಗವನ್ನು ಪ್ರವೇಶಿಸಿತು. ಹೈದರ್ ಈ ಯುದ್ಧವನ್ನು ತನ್ನ ಪ್ರತಿಷ್ಠೆಯ ಸಂಕೇತವೆಂದು ಭಾವಿಸಿ ಕಾರ್ಯಾಚರಣೆಯನ್ನು ಮುಂದುವರಿಸಿದನು. 1769ರ ವೇಳೆಗೆ ಆತನ ಸೈನ್ಯ ಮದರಾಸಿನ ಪ್ರಾಂತ್ಯವನ್ನು ತಲುಪಿದ್ದು ಬ್ರಿಟಿಷರಲ್ಲಿ ನಡುಕವನ್ನು ಹುಟ್ಟಿಸಿತು. ಅನಿವಾರ್ಯವಾಗಿ ಬ್ರಿಟಿಷರು ಹೈದರಾಲಿಯೊಂದಿಗೆ ಚರ್ಚೆ ಮತ್ತು ಸಂಧಾನಗಳ ಮೂಲಕ ‘ಮದ್ರಾಸ್ ಒಪ್ಪಂದ’ ಮಾಡಿಕೊಂಡರು. ಮೊದಲನೇ ಆಂಗ್ಲೋ-ಮೈಸೂರು ಯುದ್ಧ 1769ರಲ್ಲಿ ಸಹಿ ಹಾಕಲ್ಪಟ್ಟ ‘ಮದ್ರಾಸ್ ಒಪ್ಪಂದ’ದೊಂದಿಗೆ ಕೊನೆಯಾಯಿತು.ಹೈದರಾಲಿ


ಎರಡನೆಯ ಆಂಗ್ಲೋ-ಮೈಸೂರು ಯುದ್ಧ ( 1780- 1784 ) : ಮದರಾಸು ಒಪ್ಪಂದ ದಕ್ಷಿಣ ಭಾರತದಲ್ಲಿ ತಾತ್ಕಾಲಿಕವಾಗಿ ರಾಜಕೀಯ ಬೆಳವಣಿಗೆಗಳನ್ನು ತಡೆಹಿಡಿದಿತ್ತು. ಆದರೆ ಬ್ರಿಟಿಷರು ಮದ್ರಾಸ್ಒ ಪ್ಪಂದದ ಷರತ್ತುಗಳನ್ನು ಉಲ್ಲಂಘಿಸಲು ಯತ್ನಿಸಿದರು. ಮರಾಠರು ಮಾಧವರಾಯನ ನೇತೃತ್ವದಲ್ಲಿ ಸೈನ್ಯವನ್ನು ಮುನ್ನಡೆಸಿ ಶ್ರೀರಂಗಪಟ್ಟಣದ ಕಡೆ ನುಗ್ಗಿದಾಗ ಹೈದರ್ ಬ್ರಿಟಿಷರ ಸಹಾಯವನ್ನು ಅಪೇಕ್ಷಿಸಿದನು. ಆದರೆ ಬ್ರಿಟಿಷರು ಇದನ್ನು ತಿರಸ್ಕರಿಸಿ ಮದರಾಸು ಒಪ್ಪಂದಕ್ಕೆ ವಿರುದ್ಧವಾಗಿ ನಡೆದುಕೊಂಡರು. ಮಾಹೆಯು ಫ್ರೆಂಚರ ವಸಾಹತುವಾಗಿದ್ದು, ಹೈದರಾಲಿಯ ನಿಯಂತ್ರಣಕ್ಕೊಳಪಟ್ಟಿತ್ತು. ಬ್ರಿಟಿಷರು ಮಾಹೆಯನ್ನು ವಶಪಡಿಸಿಕೊಂಡಿದ್ದು ಎರಡನೆಯ ಮೈಸೂರು ಯುದ್ಧಕ್ಕೆ ಕಾರಣವಾಯಿತು.


1780ರಲ್ಲಿ ಎರಡನೆಯ ಮೈಸೂರು ಯುದ್ಧ ಪ್ರಾರಂಭವಾಯಿತು. ಯುದ್ಧದ ಪ್ರಾರಂಭದಲ್ಲಿ ಹೈದರ್ಮು ನ್ನಡೆ ಸಾಧಿಸಿದನು. ಕರ್ನಾಟಕ ಪ್ರಾಂತ್ಯದ ಅನೇಕ ಕೋಟೆಗಳನ್ನು ವಶಪಡಿಸಿಕೊಂಡನು. ಕಾಂಚೀಪುರಂ ವಶವಾಯಿತು. ಕೋರಮಂಡಲ ತೀರದವರೆವಿಗೂ ತನ್ನ ಸೈನ್ಯವನ್ನು ಮುನ್ನುಗ್ಗಿಸಿದನು. ಇದು ಮದರಾಸಿನ ಬ್ರಿಟಿಷ್ ಸೈನ್ಯಾಧಿಕಾರಿಗಳಲ್ಲಿ ನಡುಕವನ್ನು ತಂದಿತು. ಹೈದರ್ ಆರ್ಕಾಟಿಗೆ ಮುತ್ತಿಗೆ ಹಾಕಿ ಅದನ್ನು ವಶಪಡಿಸಿಕೊಂಡನು. ಸರ್ ಐರ್‍ಕೂಟ್‍ನ ನೇತೃತ್ವದಲ್ಲಿ ಬ್ರಿಟಿಷರ ಸೈನ್ಯ ಸಜ್ಜುಗೊಂಡಿತು. ಹೈದರ್ ಈ ಅವಧಿಯಲ್ಲಿ ವೆಲ್ಲೂರು ಮತ್ತು ವಾಂಡಿವಾಶ್‍ಗಳನ್ನು ಮುತ್ತುವುದಾಗಿ ಬೆದರಿಸಿದನು. ಹೈದರನ ಸೈನ್ಯವನ್ನು ಸರ್ ಐರ್‍ಕೂಟ್ ಪಾಂಡಿಚೇರಿಯವರೆವಿಗೂ ಹಿಂಬಾಲಿಸಿದನು. ಫ್ರೆಂಚರು ಹೈದರನಿಗೆ ಬ್ರಿಟಿಷರ ವಿರುದ್ಧ ಸಹಕರಿಸಲು ನಿರಾಕರಿಸಿದರು. ಹೈದರ್, ಇದರಿಂದಾಗಿ ಯುದ್ಧಗತಿಯನ್ನು ಬದಲಿಸಿದನು. ಹೈದರ್ ಬ್ರಿಟಿಷರ ಹತೋಟಿಯಲ್ಲಿನ ಪ್ರದೇಶಗಳಿಗೆ ಮುತ್ತಿಗೆ ಹಾಕಿ ಕೊಳ್ಳೆಹೊಡೆದು ಅಪಾರ ಸಂಪತ್ತು ಮತ್ತು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದನು.


1781ರಲ್ಲಿ ಎಂಬಲ್ಲಿ ನಡೆದ ಕದನದಲ್ಲಿ ಹೈದರ್ ಪರಾಭವಗೊಂಡನು. ಇದು ಯುದ್ಧದ ಗತಿಯನ್ನು ಬದಲಾಯಿಸಿತು ಮತ್ತು ಬ್ರಿಟಿಷರಲ್ಲಿ ಸ್ಥೈರ್ಯವನ್ನು ಹೆಚ್ಚಿಸಿತು. ತರುವಾಯ ಪೊಲೆಲೂರ್ ಮತ್ತು ಸೋಲಿಂಗೂರ್‍ಗಳ ಕದನದಲ್ಲಿಯೂ ಆರ್ಥಿಕ ಹಾನಿ ಅನುಭವಿಸಿದನು. ಈ ವೇಳೆಗೆ ಬ್ರಿಟಿಷರು ಸಾಲ್ಬಾಯ್ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಹೈದರನ ಒಕ್ಕೂಟದಿಂದ ಮರಾಠರು ಹಾಗೂ ನಿಜಾಮನನ್ನು ಸೆಳೆಯುವಲ್ಲಿ ಸಫಲರಾದರು. ಯುದ್ಧದ ಮಧ್ಯದಲ್ಲಿ ಹೈದರಾಲಿ 1782ರಲ್ಲಿ ಅನಾರೋಗ್ಯದಿಂದ ಮೃತನಾದನು. ಆತನ ಮಗ ಟಿಪ್ಪು ಯುದ್ಧವನ್ನು ಮುನ್ನಡೆಸಿದನು.

 

ಹೈದರನ ಮರಣ ಸಂದರ್ಭದಲ್ಲಿ ಮಲಬಾರ್ ಪ್ರಾಂತ್ಯದಲ್ಲಿ ನಡೆದ ಯುದ್ಧದಲ್ಲಿ ಟಿಪ್ಪು ತೊಡಗಿದ್ದನು. ಟಿಪ್ಪುವಿನ ಅನುಪಸ್ಥಿತಿಯ ಲಾಭ ಪಡೆದ ಬ್ರಿಟಿಷರು ಬಿದನೂರು ಮತ್ತು ಮಂಗಳೂರನ್ನು ವಶಪಡಿಸಿಕೊಳ್ಳಲು ಹವಣಿಸಿದರು. ತಿರುವಾಂಕೂರು, ಕಲ್ಲಿಕೋಟೆ ಮತ್ತು ಮಲಬಾರಿನ ಅನೇಕ ರಾಜರುಗಳನ್ನು ಟಿಪ್ಪುವಿನ ವಿರುದ್ಧ ಎತ್ತಿಕಟ್ಟುವ ಪ್ರಯತ್ನಗಳನ್ನು ಅವರು ನಡೆಸಿದರು. ಹೀಗಾಗಿ ಟಿಪ್ಪು ಮಂಗಳೂರು ಮತ್ತು ಕರಾವಳಿ  ತೀರಪ್ರದೇಶದ ಮೇಲೆ ಹತೋಟಿ ಸಾಧಿಸುವುದು ಸೂಕ್ತವೆಂದು ಯೋಚಿಸಿ ಮಂಗಳೂರಿನತ್ತ ಮುನ್ನಡೆದು ಬ್ರಿಟಿಷರ ಸೈನ್ಯವನ್ನು ಸೋಲಿಸಿದನು. ಕೊನೆಗೆ 1784ರ ‘ಮಂಗಳೂರು ಒಪ್ಪಂದ’ದ ಮೂಲಕ ಎರಡನೆಯ ಆಂಗ್ಲೋ-ಮೈಸೂರು ಯುದ್ಧ ಕೊನೆಗೊಂಡಿತು.