Wednesday, 6 January 2021

ಅನ್ಯರಾಷ್ಟ್ರಗಳೊಂದಿಗೆ ಭಾರತದ ಸಂಬಂಧ

 ಅಧ್ಯಾಯ - 3

ಅನ್ಯರಾಷ್ಟ್ರಗಳೊಂದಿಗೆ ಭಾರತದ ಸಂಬಂಧ


ಈ ಅಧ್ಯಾಯದಲ್ಲಿ ಕೆಳಗಿನ ಅಂಶಗಳನ್ನು ತಿಳಿಯುತ್ತೇವೆ.


· ಭಾರತ ಮತ್ತು ಚೀನಾದ ಸಂಬಂಧ. · ಭಾರತ ಮತ್ತು ಪಾಕಿಸ್ತಾನದ ಸಂಬಂಧ.

· ಭಾರತ ಮತ್ತು ರಷ್ಯಾದ ಸಂಬಂಧ. · ಭಾರತ ಮತ್ತು ಅಮೆರಿಕಾದ ಸಂಬಂಧ.


ಒಂದು ಕುಟುಂಬವು ಬೇರೆ ಯಾವುದೇ ಕುಟುಂಬದ ಜೊತೆಗೆ ವ್ಯವಹರಿಸದೇ ಅಭಿವೃದ್ಧಿಯಾಗಲು ಸಾಧ್ಯವಾಗುವುದಿಲ್ಲ. ಹಾಗೆಯೇ ಒಂದು ರಾಷ್ಟ್ರವು ಬೇರೆ ರಾಷ್ಟ್ರಗಳ ಜೊತೆಗೆ ವ್ಯವಹರಿಸದೆ, ಉತ್ತಮ ಸಂಬಂಧವನ್ನು ಹೊಂದದೆ ಅಭಿವೃದ್ಧಿಯಾಗಲು ಸಾಧ್ಯವಾಗುವುದಿಲ್ಲ. ಪ್ರಸ್ತುತದ ಜಾಗತೀಕರಣ ಮತ್ತು ಆಧುನೀಕರಣದ ಯುಗದಲ್ಲಿ ಒಂದು ರಾಷ್ಟ್ರವು ಮತ್ತೊಂದು ರಾಷ್ಟ್ರದ ಜೊತೆಗೆ ಉತ್ತಮವಾದ ಸಂಬಂಧವನ್ನು ಹೊಂದುವುದು ಅನಿರ್ವಾಯವೂ, ಅಗತ್ಯವೂ ಆಗಿದೆ. ನಮ್ಮ ಸಂವಿಧಾನದ ನಾಲ್ಕನೇ ಭಾಗದಲ್ಲಿ ರಾಜ್ಯನೀತಿ ನಿರ್ದೇಶಕ ತತ್ವಗಳಡಿಯಲ್ಲಿ ವಿಧಿ 51 ರಲ್ಲಿ ಅಂತರಾಷ್ಟ್ರೀಯ ಶಾಂತಿ ಮತ್ತು ಸೌಹಾರ್ದತೆಯ ಕುರಿತು ತಿಳಿಸಲಾಗಿದೆ. ಇದರನ್ವಯ ಭಾರತವು ಅನ್ಯರಾಷ್ಟ್ರಗಳೊಡನೆ ಉತ್ತಮವಾದ ಭಾಂದವ್ಯವನ್ನು ಹೊಂದಿದೆ.
ಪ್ರಮುಖ ನೆರೆ ರಾಷ್ಟ್ರಗಳ ಸಂಬಂಧ


ಭಾರತ ಮತ್ತು ಚೀನಾ : ಚೀನಾ ಭಾರತ ಭೂಪ್ರದೇಶಕ್ಕೆ ಹೊಂದಿಕೊಂಡಿರುವ ದೊಡ್ಡ ನೆರೆಯ ರಾಷ್ಟ್ರವಾಗಿದೆ. ಭಾರತ ಮತ್ತು ಚೀನಾಗಳ ಸಂಬಂಧವನ್ನು ಸಿಂಧೂ ನದಿ ಬಯಲಿನ ನಾಗರೀಕತೆ ಮತ್ತು ಮೆಸಪಟೋಮಿಯ ನಾಗರೀಕತೆಯೊಂದಿಗೆ ಗುರುತಿಸಲಾಗುತ್ತದೆ. ಭಾರತದಲ್ಲಿ ಉದಯಿಸಿದ ಭೌದ್ಧ ಧರ್ಮವು ಪ್ರಸ್ತುತ ಚೀನಾದಲ್ಲಿ ಪ್ರಸಾರಗೊಂಡಿರುವುದು. ಭಾರತ ಮತ್ತು ಚೀನಾಗಳ ನಡುವಿನ ಪ್ರಾಚೀನ ಕಾಲದ ಸಂಬಂಧವನ್ನು ಪ್ರತಿಬಿಂಬಿಸುತ್ತದೆ. ಭಾರತದಲ್ಲಿನ ರಾಜರುಗಳು ಚೀನಾದ ಹಲವು ರಾಜ ವಂಶಗಳೊಂದಿಗೆ ಉತ್ತಮ ವ್ಯಾಪಾರ ಸಂಪರ್ಕಗಳನ್ನು ಹೊಂದಿರುವ ಹಲವು ಉಲ್ಲೇಖಗಳು ದೊರೆಯುತ್ತವೆ. ಭಾರತ ಮತ್ತು ಚೀನಾಗಳ ನಡುವಿನ ವ್ಯಾಪಾರ ಸಂಬಂಧವನ್ನು ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಚೀನಾದ ರೇಷ್ಮೆಯ ಬಗ್ಗೆ ಉಲ್ಲೇಖವಾಗಿರುತ್ತದೆ. ಈ ರೀತಿಯ ಐತಿಹಾಸಿಕ ಸಂಬಂಧವನ್ನು ಹೊಂದಿದ್ದ ಭಾರತ ಮತ್ತು ಚೀನಾ ಸಾರ್ವಭೌಮ ರಾಷ್ಟ್ರಗಳಾಗಿ ಉದಯಿಸಿದ ನಂತರದಲ್ಲಿ ಪಂಚಶೀಲ ತತ್ವಗಳ ಮೂಲಕ ಎರಡು ರಾಷ್ಟ್ರಗಳ ಸಂಬಂಧಗಳನ್ನು ವೃದ್ಧಿಸುವ ಪ್ರಯತ್ನ ಮಾಡಲಾಯಿತು. ಆದರೆ 1962 ರಲ್ಲಿ ಟಿಬೆಟ್ ವಿವಾದ ಉಲ್ಬಣಗೊಂಡು ಎರಡು ರಾಷ್ಟ್ರಗಳ ನಡುವೆ ಯುದ್ಧ ನಡೆದ ನಂತರದಲ್ಲಿ ಗಡಿ ಸಮಸ್ಯೆಯು ಉಲ್ಬಣಗೊಂಡಿತು.

 ಈ ಗಡೀ ಸಮಸ್ಯೆ ಇಂದಿಗೂ ಕೂಡ ಮುಂದುವರೆದಿದ್ದು, ಚೀನಾವು ಭಾರತದ ಭಾಗವಾಗಿರುವ ಅರುಣಾಚಲ ಪ್ರದೇಶತನಗೆ ಸೇರಬೇಕೆಂದು ಪ್ರತಿಪಾದಿಸುತ್ತಿರುವುದು ಎರಡು ರಾಷ್ಟ್ರಗಳ ಸಂಬಂಧಗಳನ್ನು ಮತ್ತಷ್ಟು ಕಗ್ಗಂಟಾಗಿಸಿದೆ. ಭಾರತ ಮತ್ತು ಚೀನಾ ನಡುವೆ ಗಡಿ ವಿವಾದ ಇದ್ದರೂ ಕೂಡ ಎರಡು ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ರಾಯಭಾರ ಸಂಬಂಧಗಳು ನಿರಂತರವಾಗಿ ಮುಂದುವರೆದಿವೆ. ಭಾರತ ಮತ್ತು ಚೀನಾ ದೇಶಗಳು  ಜಗತ್ತಿನಲ್ಲಿಯೇ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವುದಲ್ಲದೇ ವಿಶ್ವದ ಅಭಿವೃದ್ಧಿ ಮುಂಚೂಣಿಯಲ್ಲಿರುವ ಎರಡು ಪ್ರಮುಖ ರಾಷ್ಟ್ರಗಳಾಗಿ ಗುರುತಿಸಲ್ಪಟ್ಟಿವೆ.

 1980 ರ ದಶಕದ ನಂತರದಲ್ಲಿ ಚೀನಾ ಭಾರತದೊಂದಿಗೆ ದೊಡ್ಡ ಮಟ್ಟದಲ್ಲಿ ವ್ಯಾಪಾರ ಮತ್ತು ವಾಣಿಜ್ಯ ಸಂಪರ್ಕವನ್ನು ಹೊಂದಿರುವ ರಾಷ್ಟ್ರವಾಗಿ ಬೆಳೆದಿರುವುದು ಎರಡು ರಾಷ್ಟ್ರಗಳ ಸಂಬಂಧಗಳನ್ನು ಗಟ್ಟಿಗೊಳಿಸಿದೆ. ಇದಲ್ಲದೆ 2015ರ ನಂತರದಲ್ಲಿ ಭಾರತ ಮತ್ತು ಚೀನಾಗಳ ಪ್ರಯತ್ನದ ಫಲವಾಗಿ ಃಖIಅS ರಾಷ್ಟ್ರಗಳ ಗುಂಪು ಪ್ರಾರಂಭಗೊಂಡಿರುವುದು ಈ ಎರಡು ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ಮತ್ತಷ್ಟು ಉತ್ತಮಗೊಳಿಸಿದೆ.


 

ಭಾರತ ಮತ್ತು ಪಾಕಿಸ್ತಾನ : ಭಾರತ ಮತ್ತು ಪಾಕಿಸ್ತಾನಗಳೆರಡು ನೆರೆಯ ರಾಷ್ಟ್ರಗಳಾಗಿವೆ. ಪಾಕಿಸ್ತಾನ ಭಾರತಕ್ಕೆ ಕೇವಲ ನೆರೆಯ ರಾಷ್ಟ್ರವಾಗಿರದೆ, ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಅವಿಭಾಜ್ಯ ಅಂಗವಾಗಿತ್ತು. ಆದರೆ 1947ರ ಭಾರತ ಸ್ವಾತಂತ್ರ್ಯ ಕಾಯಿದೆಯನ್ವಯ ಎರಡು ಪ್ರತ್ಯೇಕ ಸಾರ್ವಭೌಮ ರಾಷ್ಟ್ರಗಳಾಗಿ ರಚಿತವಾದವು. ಸ್ವತಂತ್ರ್ಯಗೊಂಡ ನಂತರ ಭಾರತ ಮತ್ತು ಪಾಕಿಸ್ತಾನಗಳ ನಡುವೆ ವಿದೇಶಾಂಗ ವ್ಯವಹಾರಗಳು ಪ್ರಾರಂಭಗೊಂಡವು. ಆದರೆ ಈ ಎರಡು ರಾಷ್ಟ್ರಗಳ ನಡುವೆ ಜಮ್ಮು-ಕಾಶ್ಮೀರ, ಭಯೋತ್ಪಾದನೆ, ನೀರಿನ ಹಂಚಿಕೆ ಮುಂತಾದ ಸಮಸ್ಯೆಗಳಿವೆ. 

ಹಾಗಾಗಿ ಇಲ್ಲಿಯವರೆಗೆ ಎರಡು ರಾಷ್ಟ್ರಗಳ ನಡುವೆ ಮೂರು ಭಾರಿ ಯುದ್ಧಗಳು ನಡೆದಿವೆ. ಎರಡು ರಾಷ್ಟ್ರಗಳ ನಡುವೆ ಉತ್ತಮ ಭಾಂದವ್ಯ ಹೊಂದಲು ತಾಷ್ಕೆಂಟ್ ಒಪ್ಪಂದ, ಸಿಮ್ಲಾ ಒಪ್ಪಂದ, ಲಾಹೋರ್ ಬಸ್ ಯಾತ್ರೆ, ಆಗ್ರಾ ಶೃಂಗಸಭೆಯಂತಹ ದ್ವಿಪಕ್ಷಿಯ ಮಾತುಕತೆಗಳನ್ನು ನಡೆಸಲಾಗಿದೆ. ಆದರೆ ಈ ರೀತಿಯ ಒಪ್ಪಂದಗಳು ನಿರೀಕ್ಷಿತ ಯಶಸ್ಸನ್ನು ಸಾಧಿಸಲು ವಿಫಲವಾಗಿವೆ. ಏಕೆಂದರೆ ಈ ಎರಡು ರಾಷ್ಟ್ರಗಳು ನಿರಂತರವಾಗಿ ದ್ವಿಪಕ್ಷಿಯ ಮಾತುಕತೆಗಳಲ್ಲಿ ನಿರತವಾಗಿದ್ದರೂ ಕೂಡ 2001ರಲ್ಲಿ ಭಾರತ ಸಂಸತ್ತಿನ ಮೇಲಿನ ದಾಳಿ, 2008ರ ಮುಂಬೈನ ದಾಳಿ, 2016ರ ಪಠಾಣ್ ಕೋಟ್ ದಾಳಿಗಳು ಪರಸ್ಪರ ಸಂಬಂಧಗಳ ವೃದ್ದಿಗೆ ಹಿನ್ನಡೆಯನ್ನು ಉಂಟುಮಾಡಿವೆ.


ಭಾರತ ಮತ್ತು ಪಾಕಿಸ್ತಾನಗಳ ನಡುವೆ ಕಾಶ್ಮೀರ ಸಮಸ್ಯೆಗೆ ಸಂಬಂಧಿಸಿದಂತೆ ನಿರಂತರವಾಗಿ ಘರ್ಷಣೆ ಮುಂದುವರೆದಿದ್ದರೂ ಕೂಡ ಕೆಲವು ವಿಷಯಗಳಲ್ಲಿ ಈ ಎರಡು ರಾಷ್ಟ್ರಗಳು ಸಾಮ್ಯತೆಯನ್ನು ಹೊಂದಿರುವುದನ್ನು ಗುರುತಿಸಬಹುದಾಗಿದೆ. ಈ ಎರಡು ರಾಷ್ಟ್ರಗಳ ನಡುವೆ ಸಂಸ್ಕøತಿ ಮತ್ತು ಆರ್ಥಿಕ ವಿಷಯಗಳಲ್ಲಿ ಪರಸ್ಪರ ವಿನಿಮಯ ಕಾರ್ಯಗಳನ್ನು ಮುಂದುವರೆಸಿವೆ. ಏಕೆಂದರೆ ಸ್ವಾತಂತ್ರ್ಯಗೊಂಡ ದಿನದಿಂದ ಪ್ರಸ್ತುತದವರೆಗೆ  ವ್ಯಾಪಾರ, ವಾಣಿಜ್ಯ, ಸಂಬಂಧಗಳು ನಿರಂತರವಾಗಿ ಮುಂದುವರೆದಿವೆ. ಹಾಗೆಯೇ ಕ್ರೀಡೆ, ಸಾಂಸ್ಕøತಿಕ, ವ್ಯವಹಾರಗಳಲ್ಲಿ, ನೈಸರ್ಗಿಕ ವಿಕೋಪಗಳು ಸಂಭವಿಸಿದ ಸಂದರ್ಭಗಳಲ್ಲಿ ಎರಡು ರಾಷ್ಟ್ರಗಳು ಸೌಹಾರ್ಧಯುತವಾದ ಮತ್ತು ಪರಸ್ಪರ ಸಹಕಾರ ಹೊಂದಿª